ಜಿಲ್ಲೆ

ರೋಗ ತಡೆಯಲು ಯೋಗವೇ ಮದ್ದು

ಚಿತ್ರದುರ್ಗ: ರೋಗಗಳು ಬಾರದಂತೆ ತಡೆಯಲು ಯೋಗವೇ ಅತ್ಯುತ್ತಮವಾದ ಮದ್ದು ಎಂದು ಯೋಗ ಗುರು ಎಲ್.ಎಸ್.ಚಿನ್ಮಯಾನಂದ ಸಲಹೆ ನೀಡಿದರು.

ದಾರುಕ ಬಡಾವಣೆಯ ಗಣಪತಿ ದೇಗುಲ ಮುಂಭಾಗ ಬಡಾವಣೆ ನಿವಾಸಿಗಳಿಂದ ಭಾನುವಾರ ಹಮ್ಮಿಕೊಂಡಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.

ಕಾಯಿಲೆಗಳಿಂದ ದೂರವಿರಲು ಮನೆಮದ್ದಾದ ಯೋಗದ ಕುರಿತು ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ಚಿಕ್ಕಂದಿನಿಂದಲೇ ಮಕ್ಕಳಿಗೆ ಯೋಗಾಭ್ಯಾಸದಲ್ಲಿ ತೊಡಗಿಸಬೇಕು. ಆಗ ವಿವಿಧ ರೋಗಗಳಿಂದ ಮುಕ್ತರಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಪಂ ಕೆಡಿಪಿ ಸದಸ್ಯ ಕೆ.ಸಿ.ನಾಗರಾಜ್ ಮಾತನಾಡಿ, ಯೋಗದಿಂದ ಉತ್ತಮ ಆರೋಗ್ಯ ಹೊಂದಬಹುದು. ನಿತ್ಯವೂ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಬಹುದು ಎಂದರು.

ಮರ್ಚೆಂಟ್ಸ್ ಬ್ಯಾಂಕ್‌ನ ನಿರ್ದೇಶಕ ರಘುರಾಮರೆಡ್ಡಿ, ಬಡಾವಣೆಯ ಮಂಜುನಾಥ್, ಹೇಮಂತಕುಮಾರ್, ರಾಮಪ್ಪ, ಕೇದಾರನಾಥ್, ರಂಗಸ್ವಾಮಿ, ಚಂದ್ರಶೇಖರ್, ಮೆಕಾನಿಕ್ ರಂಗಸ್ವಾಮಿ, ಅನಸೂಯ ರಂಗಸ್ವಾಮಿ, ಶೋಭಾ ದೇವರಾಜ್, ವಾಕರ್ಸ್‌ ಗ್ರೂಪ್ ಸದಸ್ಯರಿದ್ದರು.