ರೋಣ: ಪಟ್ಟಣದ ಜನಸಂಖ್ಯೆ 31 ಸಾವಿರಕ್ಕೂ ಹೆಚ್ಚು, ಆದರೆ, ಪೌರ ಕಾರ್ವಿುಕರ ಸಂಖ್ಯೆ ಮಾತ್ರ ಅಗತ್ಯಕ್ಕೆ ತಕ್ಕಂತೆ ಇಲ್ಲ. ಇದರಿಂದಾಗಿ ಇರುವ ಪೌರ ಕಾರ್ವಿುಕರ ಮೇಲೆ ಅಧಿಕ ಒತ್ತಡ ಬಿದ್ದಿದೆ.
ಪುರಸಭೆಗೆ 23 ವಾರ್ಡ್ಗಳಿದ್ದು, 47 ಪೌರ ಕಾರ್ವಿುಕ ಅಗತ್ಯವಿದೆ. ಆದರೆ, 23 ಪೌರ ಕಾರ್ವಿುಕರು ಮಾತ್ರ ಇದ್ದಾರೆ. ಈ ಹಿಂದಿನ ಪುರಸಭೆಯ ಮುಖ್ಯಾಧಿಕಾರಿಯ ಬೇಜವಾಬ್ದಾರಿತನದಿಂದಾಗಿ ಪೌರ ಕಾರ್ವಿುಕರು ಕೆಲಸ ಬಿಟ್ಟ ಪರಿಣಾಮ ಪೌರ ಕಾರ್ವಿುಕರ ಸಂಖ್ಯೆ 13ಕ್ಕೆ ಕುಸಿದಿತ್ತು. ನಂತರ ಬಂದ ಪುರಸಭೆ ಮುಖ್ಯಾಧಿಕಾರಿ ನೂರುಲ್ಲಾಖಾನ್, ಕಾರ್ವಿುಕರಿಗೆ ನೀಡಬೇಕಿದ್ದ ಸಂಬಳ ನೀಡಿ ಮತ್ತೆ ಕೆಲಸಕ್ಕೆ ಪಡೆದಿದ್ದರು. ಇನ್ನೂ 25 ಪೌರ ಕಾರ್ವಿುಕರ ಹುದ್ದೆ ಖಾಲಿ ಇವೆ. ಪೌರ ಕಾಯ್ದೆಯಂತೆ ಪ್ರತಿ 700 ಜನಸಂಖ್ಯೆಗೆ ಒಬ್ಬ ಪೌರ ಕಾರ್ವಿುಕರಿರಬೇಕು. ಆದರೆ, ಈಗ 1000ಕ್ಕೂ ಅಧಿಕ ಸಂಖ್ಯೆಗೆ ಒಬ್ಬ ಕಾರ್ವಿುಕರಿದ್ದಾರೆ.
ಕೆಲಸಕ್ಕೆ ಮಾತ್ರ ನಾವು ಬೇಕು. ಆದರೆ, ನಮಗೆ ಮಾಸ್ಕ್ ಸೇರಿ ಯಾವುದೇ ರೀತಿಯ ಮೂಲಸೌಲಭ್ಯ ಕಲ್ಪಿಸಿಲ್ಲ. ಕರೊನಾ ಸೋಂಕು ಹರಡದಂತೆ ಎಲ್ಲರೂ ಮನೆಯಲ್ಲಿ ಇರುವಂತೆ ಹೇಳಿರುವುದು ಸರಿಯಾಗಿದೆ. ಆದರೆ, ನಾವು ಮಾತ್ರ ಕರ್ತವ್ಯದಲ್ಲಿ ಪಾಲ್ಗೊಳ್ಳುತ್ತೇವೆ. ಇದೆಂತ ನ್ಯಾಯ ಎಂದು ಪೌರ ಕಾರ್ವಿುಕರೊಬ್ಬರು ಪ್ರಶ್ನಿಸಿದರು.
ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಲಸ ಮಾಡುತ್ತೇವೆ. ಮನೆಗೆ ತೆರಳಿದ ನಂತರ ಅಧಿಕಾರಿಗಳು ಕರೆದರೆ ಮತ್ತೆ ಬರುತ್ತೇವೆ. ಹಬ್ಬ, ಅಮಾವಾಸ್ಯೆ ಯಾವುದಕ್ಕೂ ರಜೆ ಇಲ್ಲ. ಕರೊನಾ ಬಂದ ನಂತರವಂತೂ ಅಹೋರಾತ್ರಿ ಕೆಲಸ. ಎಷ್ಟೇ ದುಡಿದರೂ ಹೊಟ್ಟೆ, ಬಟ್ಟೆಗೆ ಮಾತ್ರ ಆಗುತ್ತದೆ. ಇಲ್ಲಿಯವರೆಗೂ ವಾಸಿಸಲು ಒಂದು ಸ್ವಂತ ಮನೆಯಿಲ್ಲ ಎನ್ನುತ್ತಾರೆ ಇಲ್ಲಿನ ಪೌರ ಕಾರ್ವಿುಕರು.
EndFragment