ಜಿಲ್ಲೆ

ರೊಪ್ಪ ಬಡಾವಣೆಯಲ್ಲಿ ಕಳ್ಳರ ಅಟ್ಟಹಾಸ

ಪಾವಗಡ: ಪಟ್ಟಣದ ಸಮೀಪದಲ್ಲೇ ಇರುವ ರೂಪ್ಪ ಬಡಾವಣೆಯಲ್ಲಿ ಮಂಗಳವಾರ ರಾತ್ರಿ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನವಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ ವೇಳೆ ನಡೆದ ಕಳ್ಳತನದಲ್ಲಿ ಸತ್ಯನಾರಾಯಣ, ಮಂಜುನಾಥ್​, ಶಾಂತಮ್ಮ ಮನೆಗಳಲ್ಲಿ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಸತ್ಯನಾರಾಯಣ ಅವರ ಮನೆಯಿಂದ 10 ಗ್ರಾಂ ಚಿನ್ನ ಹಾಗೂ 1 ಲಕ್ಷ ರೂ.ನಗದು ಕಳ್ಳತನವಾಗಿದೆ. ಇನ್ನೊಂದು ಮನೆಯಲ್ಲಿ ಕಳ್ಳತನಕ್ಕೆ ಯತ್ನವಾಗಿದೆ ಎಂದು ತಿಳಿದುಬಂದಿದೆ. ಪಾವಗಡ ಪೊಲೀಸ್​ ಠಾಣೆಯಲ್ಲಿ ಸತ್ಯನಾರಾಯಣ ಎಂಬುವವರದ್ದು ಮಾತ್ರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಉಳಿದ 3 ಪ್ರಕರಣಗಳ ಬಗ್ಗೆ ಪೊಲೀಸ್​ ಇಲಾಖೆಯಿಂದ ಯಾವುದೇ ಮಾಹಿತಿ ನೀಡುತ್ತಿಲ್ಲಾ. ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತುಮಕೂರಿನಿಂದ ಶ್ವಾನದಳ ತಂಡ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದೆ.