ಚಿತ್ರದುರ್ಗ: ಲೋಕಸಭಾ ಕ್ಷೇತ್ರದ ರೈಲ್ವೆ ಯೋಜನೆಗಳಿಗೆ ವೇಗ ನೀಡಿ ಕಾಲ ಮಿತಿಯೊಳಗೆ ಪೂರ್ಣಗೊಳಿಸುವಂತೆ ಒತ್ತಾಯಿಸಿ ಹೊಸದಿಲ್ಲಿಯಲ್ಲಿ ಗುರುವಾರ ರೈಲ್ವೆ ಸಚಿವ ಅಶ್ವಿನಿವೈಷ್ಣವ್ ಅವರನ್ನು ಸಂಸದ ಗೋವಿಂದ ಎಂ.ಕಾರಜೋಳ ಅವರು ಭೇಟಿ ಮಾಡಿ ಮನವಿ ಮಾಡಿದರು. ಕಬ್ಬಿಣ, ಮ್ಯಾಂಗ ನೀಸ್ ಅದಿರನ್ನು ಸಾಗಾಟ ಮೂಲಕ ಮೈಸೂರು ನೈಋತ್ಯ ರೈಲ್ವೆ ವಲಯದಲ್ಲೇ ಇಲಾಖೆಗೆ ಚಿತ್ರದುರ್ಗ ಹೆಚ್ಚಿನ ಆದಾಯ ತಂದುಕೊಡುವ ಜಿಲ್ಲೆ ಯಾಗಿದೆ.
ಹೀಗಿದ್ದೂ ಚಿತ್ರದುರ್ಗಕ್ಕೆ ಹೆಚ್ಚಿನ ಪ್ರಾಮುಖ್ಯತೆ ರೈಲ್ವೆ ಸಚಿವಾಲಯದಿಂದ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಗಾಗಲೇ ಚಾಲನೆಯಲ್ಲಿರುವ ಯೋಜನೆಗಳಿಗೆ ವೇಗ ನೀಡುವುದರ ಜತೆಗೆ ಹೊಸ ಯೋಜನೆಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ದ್ದಾರೆ.
ಅಮೃತ್‌ಭಾರತ್ ನಿಲ್ದಾಣ ಯೋಜನೆಯಡಿ ಚಿತ್ರದುರ್ಗದಲ್ಲಿ ನೂತನ ನಿಲ್ದಾಣವನ್ನು ಐತಿಹಾಸಿಕ ಪರಂಪರೆ,ವೈಭವ ಬಿಂಬಿಸುವ ವಾಸ್ತು ಶಿಲ್ಪವ ನ್ನು ಅಳವಡಿಸಿಕೊಂಡು ನಿಲ್ದಾಣದ ಮುಂಭಾಗದ ಕೋಟೆಯ ಮಾದರಿ ಹೋಲುವಂತೆ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸ ಬೇಕು. ಶೇ.50:50ರ ವೆಚ್ಚ ಹಂಚಿಕೆ ಆಧಾರದಲ್ಲಿ ಪ್ರಗತಿಯಲ್ಲಿರುವ ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರ ತನ್ನ ಪಾಲು ಬಿಡುಗಡೆ ಮಾಡದೇ ಕಾಮಗಾರಿ ಕುಂಟಿತವಾಗಿದ್ದು,ರಾಜ್ಯಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಬೇಕು.
ರಾಯದುರ್ಗ-ತುಮಕೂರು ರೈಲು ಮಾರ್ಗದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಚಳ್ಳಕೆರೆ ನಗರದಲ್ಲಿ ಚಳ್ಳಕೆರೆ-ಪರಶುರಾಂಪುರ ರಸ್ತೆಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ 45ಕ್ಕೆ ಮೇಲು ಸೇತುವೆ ನಿರ್ಮಿಸುವುದು.
ಹೊಸದುರ್ಗ ರೋಡ್ ರೈಲ್ವೆ ಸ್ಟೇಷನ್‌ನಲ್ಲಿ ವಾಸ್ಕೋಡಿಗಾಮ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್, ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್ ಪ್ರೆಸ್,ಚಾಲುಕ್ಯಎಕ್ಸ್‌ಪ್ರೆಸ್,ಗೋಲಗುಂಬಜ್ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ಒದಗಿಸುವಂತೆ ಸಂಸದರು ಸಚಿವರಿಗೆ ಮನವಿ ಮಾಡಿದ್ದಾರೆ.