ಜಿಲ್ಲೆ

ರೈಲ್ವೆ ಯೋಜನೆಗೆ 600 ಕೋಟಿ ರೂ.

ಗದಗ: ಗದಗ-ಯಲವಿಗಿ ರೈಲ್ವೆ ಯೋಜನೆಗೆ ರಾಜ್ಯ ಸರ್ಕಾರದಿಂದ 600 ಕೋಟಿ ರೂಪಾಯಿ ನೀಡಲಾಗುವುದು. ಈ ರೈಲು ಶಿರಹಟ್ಟಿಯ ಮೂಲಕ ಸಾಗá-ವುದರಿಂದ ಕ್ಷೇತ್ರದ ಅಭಿವೃದ್ಧಿಯ ಬಾಗಿಲು ತೆರೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಶಿರಹಟ್ಟಿಯ ಎಫ್.ಎಂ. ಡಬಾಲಿ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಾಲವಾಡಗಿ ನೀರಾವರಿ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗá-ವುದು. ತಮಗೊಂಡ ನೀರಾವರಿ ಯೋಜನೆಗಳಿಗೆ ಶೀಘ್ರದಲ್ಲಿ ಮಂಜೂರಾತಿ ನೀಡಲಾಗುವುದು. ಶಿರಹಟ್ಟಿ-ಮುಂಡರಗಿ ಕ್ಷೇತ್ರವನ್ನು ಡೆಸ್ಟಿನೇಷನ್ ಕರ್ನಾಟಕ ಯೋಜನೆಗೆ ಜೋಡಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು ಎಂದು ಸಿಎಂ ಘೊಷಿಸಿದರು.

ಶಿರಹಟ್ಟಿ ಹೊಗಳಿದ ಮುಖ್ಯಮಂತ್ರಿ: 2018ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಬೂತ್​ಗಳಲ್ಲೂ ಬಿಜೆಪಿಗೆ ಲೀಡ್ ಮತ ಕೊಟ್ಟ ರಾಜ್ಯದ ಏಕೈಕ ಕ್ಷೇತ್ರ ಶಿರಹಟ್ಟಿ. ಇಷ್ಟೊಂದು ಜನಸ್ತೋಮ ಶಿರಹಟ್ಟಿ ಕ್ಷೇತ್ರದಲ್ಲಿ ಸೇರಿದ್ದು ಇದೇ ಮೊದಲು ಎಂದು ಹೊಗಳಿದ ಸಿಎಂ, ಭಾವೈಕ್ಯದ ನಾಡು ಶಿರಹಟ್ಟಿ, ತುಂಗಭದ್ರೆ ತಟದ ಕ್ಷೇತ್ರ ಮುಂಡರಗಿ ಪಟ್ಟಣ ಅಭಿವೃದ್ಧಿ ಪಥದತ್ತ ಸಾಗುತ್ತಿವೆ. ಭಾವೈಕ್ಯದ ನಾಡಲ್ಲಿನ ಈ ಸಂಕಲ್ಪಯಾತ್ರೆ ವಿಜಯಯಾತ್ರೆಯಾಗಿ ಮುನ್ನುಗ್ಗಲಿ ಎಂದು ಆಶಿಸಿದರು.

ಕನಕದಾಸರ ಭವನಕ್ಕೆ 1 ಕೋಟಿ: ಶಿರಹಟ್ಟಿಯಲ್ಲಿ ಕನಕದಾಸರ ಸಭಾಭವನ ನಿರ್ವಣಕ್ಕೆ ಬೇಡಿಕೆ ಇದೆ. ಇದಕ್ಕಾಗಿ 1 ಕೋಟಿ ರೂಪಾಯಿ ಶೀಘ್ರವೇ ಬಿಡುಗಡೆ ಮಾಡಲಾಗುವುದು. ಜಿಲ್ಲೆಯ 1.20 ಲಕ್ಷ ರೈತರಿಗೆ 209 ಕೋಟಿ ರೂಪಾಯಿ ಬೆಳೆ ಪರಿಹಾರ ಬಿಡುಗಡೆಯಾಗಿದೆ. 97 ಕೋಟಿ ರೂಪಾಯಿ ಬೆಳೆ ವಿಮೆ ಬಂದಿದೆ ಎಂದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಬಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಸಿ, ವಿ.ವಿ. ಕಪ್ಪತ್ತನವರ, ಹೇಮಗಿರೀಶ ಹಾವಿನಾಳ, ಸಿ.ಸಿ. ನೂರಶೆಟ್ಪರ, ವಿರೂಪಾಕ್ಷ ಅಣ್ಣಿಗೇರಿ, ಡಾ. ಚಂದ್ರು ಲಮಾಣಿ, ಗುರುನಾಥ ದಾನಪ್ಪನವರ, ಡಾ.ಭೀಮಸಿಂಗ್ ರಾಠೋಡ, ಪ್ರವೀಣಗೌಡ ಪಾಟೀಲ, ತಿಮ್ಮರಡ್ಡಿ ಮರಡ್ಡಿ, ಗಂಗಾಧರ ಮೆಣಸಿನಕಾಯಿ, ನಾಗರಾಜ ಲಕ್ಕುಂಡಿ, ಮಂಜುನಾಥ ನಾಯಕ, ಮಹೇಶ ಲಮಾಣಿ, ಅಶೋಕ ಪಲ್ಲೇದ, ಸಣ್ಣೀರಪ್ಪ ಹಳ್ಳೆಪ್ಪನವರ, ಕರಬಸಪ್ಪ ಹಂಚಿನಾಳ, ಜಾನು ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ಫಕೀರೇಶ ರಟ್ಟಿಹಳ್ಳಿ, ನಾಗರಾಜ ಕುಲಕರ್ಣಿ ಇದ್ದರು.

ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಯ ಸರ್ಕಾರ ಬಹಳ ದಿನ ಇರಲಿಲ್ಲ. ಜನರು ಬಿಜೆಪಿಗೆ ಅಧಿಕಾರ ನೀಡಿದರು. ಚುನಾವಣೆ ಸಂದರ್ಭದಲ್ಲಿ ಆಮಿಷವೊಡ್ಡುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ. ಸಿ.ಸಿ. ಪಾಟೀಲ. ಲೋಕೋಪಯೋಗಿ ಸಚಿವ
ಶಿರಹಟ್ಟಿ ಮತ್ತು ಮುಂಡರಗಿ ಭಾಗದಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ತುಂಬಿಸá-ವ ಕೆಲಸ ಮುಂದುವರಿದಿದೆ. ಸೂಕ್ತ ಸಮಯದಲ್ಲಿ ರಾಜ್ಯ ಸರ್ಕಾರ ಅನುದಾನ ನೀಡಿ ಈ ಭಾಗದ ಜನರ ಭಾವನೆಗೆ ಸ್ಪಂದಿಸಿದೆ. ಕಳಕಪ್ಪ ಬಂಡಿ, ಶಾಸಕ
ಕಾರ್ಯಕರ್ತರಿಗೆ ಸೇವೆ ಮಾಡಿದ ಋಣ ಇಂದು ತೀರಿಸಿದಿರಿ. ಸಮಾವೇದಲ್ಲಿ ಸೇರಿದ ಜನಸ್ತೋಮವೇ ಇದಕ್ಕೆ ಸಾಕ್ಷಿ. ನಿಮ್ಮ ಪಾದಗಳನ್ನು ತಲೆ ಮೇಲೆ ಹೊತ್ತು ತಿರುಗಿದರೂ ಋಣ ತೀರಿಸಲಾಗದು.| ರಾಮಣ್ಣ ಲಮಾಣಿ, ಶಿರಹಟ್ಟಿ ಶಾಸಕ
ಪುಣೆ-ಬೆಂಗಳೂರು ನಗರವನ್ನು 6 ಗಂಟೆಯಲ್ಲಿ ಪ್ರಯಾಣಿಸಲು ಸಾಧ್ಯವಾಗá-ವ 6 ಪಥದ ರಸ್ತೆ ನಿರ್ವಿುಸಲು ವಿಸõತ ಯೋಜನಾ ವರದಿ ಸಿದ್ಧವಾಗಿದೆ. ದೇಶದಲ್ಲಿ ಸಂಪರ್ಕ ಕ್ರಾಂತಿ ಆರಂಭವಾಗಿದೆ. | ಶಿವಕುಮಾರ್ ಉದಾಸಿ, ಸಂಸದ