ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಸಂಸದ ಪ್ರಜ್ವಲ್ ರೇವಣ್ಣ ಅವರು ಪ್ರಯಾಣಿಕರು ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ವಿಷ್ಣುಭೂಷಣ್, ಭರತ್ ತಿವಾರಿ, ಲೋಹಿತೇಶ್ವರ್, ಪಿ.ಕೆ.ಸಿಂಗ್ ಇತರರು ಇದ್ದರು. 
ಜಿಲ್ಲೆ

ರೈಲ್ವೆ ಪ್ರಯಾಣಿಕರ ಮನವಿಗೆ ಸಂಸದರ ಸ್ಪಂದನೆ

ಅರಸೀಕೆರೆ: ಅಮೃತ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಕ್ಕೆ ಕೇಂದ್ರ ಸರ್ಕಾರ 34.1 ಕೋಟಿ ರೂ. ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಸೋಮವಾರ ನಗರದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ, ಪ್ರಯಾಣಿಕರು ಹಾಗೂ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.

ವಂದೇ ಭಾರತ್ ರೈಲುಗಾಡಿ ನಿಲುಗಡೆ, ಲಕ್ಷ್ಮೀಪುರ, ಕಾಳನಕೊಪ್ಪಲು ಮೇಲ್ಸೇತುವೆ ನಿರ್ಮಾಣ, ಲಕ್ಷ್ಮೀಪುರ ಬಡಾವಣೆ ತಡೆಗೋಡೆ ತೆರವುಗೊಳಿಸಲು ಅನೇಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿ ಸಂಸದರು, ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಗತಿಶಕ್ತಿ ವಿಭಾಗದ ವಿಷ್ಣುಭೂಷಣ್, ರೈಲ್ವೆ ಹಿರಿಯ ಅಧಿಕಾರಿಗಳಾದ ಭರತ್ ತಿವಾರಿ, ಲೋಹಿತೇಶ್ವರ್, ಬಷೀರ್, ಸ್ಟೇಷನ್ ಮ್ಯಾನೇಜರ್ ಪಿ.ಕೆ.ಸಿಂಗ್, ವಾಣಿಜ್ಯ ತೆರಿಗೆ ಅಧಿಕಾರಿ ಅಂಬರೀಷ್, ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್, ಪೌರಾಯುಕ್ತ ಕೃಷ್ಣಮೂರ್ತಿ, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಯ್ಯದ್ ಸಿಕಂದರ್, ಮುಖಂಡರಾದ ಹೊಸೂರು ಗಂಗಾಧರ್, ರಮೇಶ್ ಇತರರು ಇದ್ದರು.