ಜಿಲ್ಲೆ

ರೈಲು ಸಂಚಾರದಲ್ಲಿ ಬದಲಾವಣೆ

ಹುಬ್ಬಳ್ಳಿ : ಕೊಪ್ಪಳ ಮತ್ತು ಗಿಣಿಗೇರಾ ನಿಲ್ದಾಣಗಳ ಮಧ್ಯೆ ಕೈಗೊಂಡಿರುವ ಕಾಮಗಾರಿಯಿಂದಾಗಿ ಈ ಮಾರ್ಗದ ವಿವಿಧ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಫೆ. 2ರಂದು ನರಸಾಪುರ - ಎಸ್​ಎಸ್​ಎಸ್ ಹುಬ್ಬಳ್ಳಿ, ಕಾಚಿಗುಡ - ಹುಬ್ಬಳ್ಳಿ ಸ್ಲಿಪ್ ಕೋಚ್, 3ರಂದು ಎಸ್​ಎಸ್​ಎಸ್ ಹುಬ್ಬಳ್ಳಿ - ನರಸಾಪುರ, ಹುಬ್ಬಳ್ಳಿ- ಕಾಚಿಗುಡ ಸ್ಲಿಪ್ ಕೋಚ್, ಎಸ್​ಎಸ್​ಎಸ್ ಹುಬ್ಬಳ್ಳಿ - ಗುಂತಕಲ್, ಗುಂತಕಲ್ - ಎಸ್​ಎಸ್​ಎಸ್ ಹುಬ್ಬಳ್ಳಿ, ಬೆಳಗಾವಿ - ಕಾಜಿಪೇಟ, ಎಸ್​ಎಸ್​ಎಸ್ ಹುಬ್ಬಳ್ಳಿ - ಕಾರಟಗಿ, ಕಾರಟಗಿ - ಎಸ್​ಎಸ್​ಎಸ್ ಹುಬ್ಬಳ್ಳಿ, 4 ರಂದು ಕಾಜಿಪೇಟ - ಬೆಳಗಾವಿ, ಕಾರಟಗಿ - ಎಸ್​ಎಸ್​ಎಸ್ ಹುಬ್ಬಳ್ಳಿ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಫೆ. 3 ರಂದು ತಿರುಪತಿ - ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ಹಾಗೂ ವಿಜಯಪುರ - ಯಶವಂತಪುರ ರೈಲು 120 ನಿಮಿಷ ತಡವಾಗಿ ಸಂಚರಿಸಲಿವೆ.