ಜಿಲ್ಲೆ

ರೈಲು ಸಂಚಾರ ರದ್ದು

Dharwad

ಹುಬ್ಬಳ್ಳಿ : ವಾಸ್ಕೋ ಡ ಗಾಮಾ - ಕುಲೆಮ್ ಭಾಗದಲ್ಲಿ ಜೋಡಿ ಮಾರ್ಗ ಕಾಮಗಾರಿಯ ಅಂಗವಾಗಿ ಚಂದೋರ ಗೋವಾ ಯಾರ್ಡ್‌ನಲ್ಲಿ ಜೋಡಿ ಮಾರ್ಗ ಕಾರ್ಯಕ್ಕೆ ಸಂಬಂಧಿಸಿದ ಇಂಜಿನಿಯರಿಂಗ್ ಕೆಲಸಗಳ ನಿಮಿತ್ತ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ ಹಾಗೂ ಕೆಲ ರೈಲುಗಳ ನಿರ್ಗಮನ ಸಮಯ ಬದಲಾಯಿಸಲಾಗಿದೆ.
ಸೆ. 18ರಂದು ವಾಸ್ಕೋ - ಕುಲೆಮ್ ವಿಶೇಷ ಪ್ಯಾಸೆಂಜರ್, 18, 20 ಹಾಗೂ 21 ರಂದು ಕುಲೆಮ್ - ವಾಸ್ಕೋ ವಿಶೇಷ ಡೆಮು ರೈಲು, 20 ಹಾಗೂ 21 ರಂದು ವಾಸ್ಕೋ - ಕುಲೆಮ್ ವಿಶೇಷ ಡೆಮು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.
ಸಮಯ ಬದಲಾವಣೆ : ಸೆ. 21ರಂದು ಕುಲೆಮ್ - ವಾಸ್ಕೋ ಪ್ಯಾಸೆಂಜರ್ ರೈಲು 90 ನಿಮಿಷ ಹಾಗೂ ವಾಸ್ಕೋ - ಕುಲೆಮ್ ಪ್ಯಾಸೆಂಜರ್ ರೈಲು 40 ನಿಮಿಷ ತಡವಾಗಿ ಸಂಚರಿಸಲಿವೆ.