ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ನೇತೃತ್ವದಲ್ಲಿ ಅರೆ ಬೆತ್ತಲೆ ಪಾದಯಾತ್ರೆ ಆರಂಭಗೊಂಡಿತು.  
ಜಿಲ್ಲೆ

ರೈಲು ಮಾರ್ಗಕ್ಕಾಗಿ ಅರೆಬೆತ್ತಲೆ ಪಾದಯಾತ್ರೆ ಆರಂಭ

ಬಾಗಲಕೋಟೆ: ಬಾಗಲಕೋಟೆ -ಕುಡಚಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಅರೆ ಬೆತ್ತಲೆ ಪಾದಯಾತ್ರೆ ನಗರದ ಬಸವೇಶ್ವರದಿಂದ ಶನಿವಾರ ಆರಂಭಗೊಂಡಿತು.
ಬೆಳಗ್ಗೆ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ದೊರೆಯಿತು. ಕರ್ನಾಟಕ ರಾಜ್ಯ ರೇಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ಶರ್ಟ ತೆಗೆದು ಅರಬೆತ್ತಲೆ ಪಾದಯಾತ್ರೆ ಪ್ರಾರಂಭಿಸಿದರು. ನಂತರ ಕಾಲೇಜು ರಸ್ತೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ನವನಗರಕ್ಕೆ ತಲುಪಿ ಜಿಲ್ಲಾಡಳತಕ್ಕೆ ಮನವಿ ಸಲ್ಲಿಸಿದರು. ಬಳಿಕ ವಿದ್ಯಾಗಿರಿ, ಗದ್ದನಕೇರಿ ಕ್ರಾಸ್ ಮೂಲಕ ಕಲಾದಗಿ ಕಡೆ ತೆರಳಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ಮಾತನಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಬಿಟಿಷರ ಕಾಲದಲ್ಲಿ ಯೋಜನೆ ಸಿದ್ಧವಾಗಿತ್ತು. ಸ್ವಾತಂತ್ರ‍್ಯ ಬಂದು ೭೦ ವರ್ಷ ಗತಿಸಿದರು ಈ ಬಗ್ಗೆ ಯಾರು ಚಕಾರ ಎತ್ತಲಿಲ್ಲ. ೨೦೧೦ ರಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಏಳು ವರ್ಷಗಳಿಂದ ಕಲಾದಗಿಗೆ ಬಂದು ನಿಂತಿದೆ. ಆದರೇ ಇದು ವರೆಗೂ ಪೂರ್ಣಗೊಂಡಿಲ್ಲ. ಆಳುವ ಸರ್ಕಾರಗಳು, ಈ ಭಾಗದ ಜನ ಪ್ರತಿನಿಽಗಳು ಮಲತಾಯಿ ಧೋರಣೆ ಇದಕ್ಕೆ ಕಾರಣ. ನಮ್ಮ ಭಾಗದ ಸಂಸದ ಪಿ.ಸಿ.ಗದ್ದಿಗೌಡರ, ಸಚಿವರು ಜನ ಸಾಮಾನ್ಯರ ಬೇಡಿಕೆ ಅರ್ಥ ಮಾಡಿಕೊಂಡಿಲ್ಲ. ತಮ್ಮ ಅಽಕಾರಕ್ಕಾಗಿ ಚುನಾವಣೆಗೆ ನಿಲ್ಲುತ್ತಾರೆ. ಜನ ಇಂತಹ ನಾಯಕರಿಗೆ ಪಾಠ ಕಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ ಕುಡಚಿ ವರೆಗೆ ೧೪೨ ಕಿ.ಮೀ ರೈಲು ಹಳಿ ಮಾರ್ಗದಲ್ಲಿ ಕೇವಲ ೩೩ ಕಿ.ಮೀ ವರೆಗೆ ಮಾತ್ರ ಹಳಿ ನಿರ್ಮಿಸಲಾಗಿದೆ. ಇನ್ನು ೧೧೦ ಕಿ.ಮೀ ಬಾಕಿ ಇದೆ. ಬೆಳಗಾವಿ ಅಽವೇಶನ ಮುಗಿಯುವದರೊಳಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆಗೆ ಆದೇಶ ಮಾಡಬೇಕು. ರೈಲು ಹಳಿಗಾಗಿ ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಇಲಾಖೆಯಲ್ಲಿ ನೌಕರಿ ಆದೇಶ ಪತ್ರ ನೀಡಬೇಕು ಎಂದು ಆಗ್ರಹಿಸಿದ ಅವರು, ನಮ್ಮ ಸಮಿತಿ ಒಟ್ಟು ೧೬೩ ಕಿ.ಮೀ ಕುಡಚಿ ವರೆಗೆ ಅರೆ ಬೆತ್ತಲೆ ಪಾದಯಾತ್ರೆ ಹಮ್ಮಿಕೊಂಡಿದ್ದು, ದಿನಕ್ಕೆ ೨೦ ಕಿ.ಮೀ ದಂತೆ ಸಂಚರಿಸಲಿದೆ ಎಂದು ತಿಳಿಸಿದರು.
ರೈತ ಮುಖಂಡ ಸುಭಾಸ ಶಿರಬೂರ ಮಾತನಾಡಿ, ನಮ್ಮ ಜಿಲ್ಲೆಯು ರೈತರು, ಕಾರ್ಮಿಕರು, ಬಡವರಿಂದ ಕೂಡಿದೆ. ಬಸ್ಸಿಗ್ಗಿಂತ ರೈಲು ಸಂಚಾರದಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ನಾಲ್ಕು ಸಾರಿ ಸಂಸದರಾದ ಪಿ.ಸಿ.ಗದ್ದಿಗೌಡರ ಈ ಬಗ್ಗೆ ಕಿಚ್ಚಿಂತು ಗಮನ ಹರಿಸಿಲ್ಲ. ಶೇ.೯೯ ರಷ್ಟು ಜನರಿಗೆ ಉಪಯೋಗವಾಗುವ ರೈಲ್ವೆ ಕಾಮಗಾರಿ ಬಗ್ಗೆ ನಿಸ್ಸ ಕಾಳಜಿ ವಹಿಸಿ ಕೇವಲ ಶೇ.೧ ಓಡಾಡುವ ಜನರಿಗೆ ವಿಮಾನ ನಿಲ್ದಾಣ ಮಾಡಲು ಹೊರಟಿದ್ದಾರೆ ನಮ್ಮ ಜಿಲ್ಲೆಯ ಜನ ಪ್ರತಿನಿಽಗಳು. ಇದು ದುರಂತ ಸಂಗತಿ ಎಂದು ಕಿಡಿಕಾರಿದರು.
ಹೋರಾಟಗಾರರಾದ ನಾಗರಾಜ ಕಲಕುಟಕರ್, ರಮೇಶ ಬದ್ನೂರ, ಬಸವರಾಜ ಧರ್ಮಂತಿ, ಆನಂದ ಜಕಾತಿ ಸೇರಿದಂತೆ ಇತರರು ಇದ್ದರು.