ಜಿಲ್ಲೆ

ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿರುವ ರೈಲು ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಲಾಗುತ್ತಿದೆ.

ನಗರದ ರೈಲು ನಿಲ್ದಾಣವನ್ನು ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯಡಿ ಸುಮಾರು 24 ಕೋಟಿ ರೂ, ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 2024 ೆ.27 ರಂದು ಚಾಲನೆ ನೀಡಲಾಯಿತು. ಸುಮಾರು ಒಂದು ವರ್ಷಗಳಿಂದಲೂ ಕುಂಟುತ್ತಲೇ ಸಾಗುತ್ತಿದ್ದ ಅಭಿವೃದ್ಧಿ ಕಾಮಗಾರಿಗೆ ಕಳೆದ ಒಂದು ತಿಂಗಳಿಂದ ವೇಗ ದೊರೆತಿದೆ. ಅದರಂತೆ 3 ್ಲಾಟ್ ಪಾರ್ಮ್ ಒಳಗೊಂಡಿರುವ ರೈಲು ನಿಲ್ದಾಣದಲ್ಲಿ ಛಾವಣಿ ವಿಸ್ತರಣೆ, ಅತ್ಯಾಕರ್ಷಕವಾದ ಾರ್ಕಿಂಗ್ ವ್ಯವಸ್ಥೆ, ರಸ್ತೆಗಳು, ಚರಂಡಿ, ಕಾಂಪೌಂಡ್, ಕಟ್ಟಡ, ಎಸ್ಕಿಲೇಟರ್ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಮೈಸೂರು-ಚಾಮರಾಜನಗರ ಮಾರ್ಗವಾಗಿ ಸದ್ಯ ತಿರುಪತಿ ಎಕ್ಸ್‌ಪ್ರೆಸ್, ತುಮಕೂರು ಪ್ಯಾಸೆಂಜರ್, ಚಾಮರಾಜನಗರ ಪ್ಯಾಸೆಂಜರ್ ರೈಲುಗಳು ಓಡಾಡುತ್ತಿದ್ದು, ನಿತ್ಯವೂ ಸಾವಿರಾರು ಪ್ರಯಾಣಿಕರು ಸಂಚಾರ ಮಾಡುತ್ತಾರೆ. ಈ ನಿಟ್ಟಿನಲ್ಲಿ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ರೈಲು ನಿಲ್ದಾಣದಲ್ಲಿ ಮತ್ತಷ್ಟು ಸೌಲಭ್ಯ ದೊರೆಯುವಂತೆ ಸಮಗ್ರ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನಿತ್ಯವೂ ಹತ್ತಾರು ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದು, ಶೇ.60 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಉಳಿದಂತೆ ಶೇ.40 ರಷ್ಟು ಕಾಮಗಾರಿಗೆ ವೇಗ ದೊರೆತಿದ್ದು, ಈ ವರ್ಷದ ಕೊನೆಯಲ್ಲಿ ಅತ್ಯಾಕರ್ಷಕ ರೈಲು ನಿಲ್ದಾಣವಾಗಿ ಉದ್ಘಾಟನೆಯಾಗುವ ಸಾಧ್ಯತೆಗಳಿದೆ.

ಮುಗಿದಿರುವ ಕಾಮಗಾರಿಗಳು:

ಹೊಸ ನಿಲ್ದಾಣದಲ್ಲಿ ಹಲವು ಸೌಲಭ್ಯಗಳಿದ್ದು, ರೈಲಿಗೆ ಕಾಯುವ ಸಂದರ್ಭದಲ್ಲಿ ಕುಳಿತುಕೊಳ್ಳಲು ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಕೊಠಡಿಗಳು, ಶೌಚಾಲಯ, ಮಹಿಳೆಯರಿಗಾಗಿ ಇರುವ ಕೊಠಡಿಯಲ್ಲಿ ಮಕ್ಕಳಿಗೆ ಹಾಲುಣಿಸಲು ಪ್ರತ್ಯೇಕ ಕೋಣೆ ನಿರ್ಮಾಣವಾಗಿದೆ. ಪಾರ್ಸೆಲ್ ವಸ್ತುಗಳಿಗಾಗಿ ಕಚೇರಿ, ಕೆಫೆಟೇರಿಯಾ, ಮೂರು ಆಹಾರ ಮಳಿಗೆಗಳು, ಪ್ರತ್ಯೇಕ ಶೌಚಾಲಯಗಳು, ವಿಸ್ತಾರವಾದ ಪ್ಲಾಟ್‌ಫಾರಂ, ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ, ಹೊಸ ಚರಂಡಿ ವ್ಯವಸ್ಥೆ, ನಿಲ್ದಾಣಕ್ಕೆ ಹೋಗುವ ರಸ್ತೆಗಳು ವಿಸ್ತರಣೆಯಾಗಿದೆ. ್ಲಾಟ್‌ಪಾರ್ಮ್‌ಗಳ ಛಾವಣಿಯನ್ನು ವಿಸ್ತರಣೆ ಮಾಡಲಾಗಿದೆ. ರೈಲು ನಿಲ್ದಾಣದ ಮುಖ್ಯದ್ವಾರದ ಕಾಮಗಾರಿಯೂ ಮುಕ್ತಾಯಗೊಂಡಿದೆ. ಉಳಿದಂತೆ ಕಾಮಗಾರಿಗೆ ವೇಗ ದೊರೆತಿದ್ದು, ಈಗಲೇ ರೈಲುನಿಲ್ದಾಣ ಆಕರ್ಷಕವಾಗಿ ಕಾಣುತ್ತಿದೆ.

ನಡೆಯಬೇಕಿರುವ ಕಾಮಗಾರಿ:

ರೈಲುನಿಲ್ದಾಣದ ಒಂದು ್ಲಾಟ್ ಾರ್ಮ್‌ನಿಂದ ಮತ್ತೊಂದು ್ಲಾಟ್ ಾರ್ಮ್‌ಗೆ ಹೋಗುವ ಮೇಲ್ಸೇತುವೆ, ಎಸ್ಕಿಲೇಟರ್ ಹಾಗೂ ಲ್‌ಟಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಟಿಕೆಟ್ ಕಾಯ್ದಿರಿಸಲು ಹೊಸ ಕೌಂಟರ್ ನಿರ್ಮಾಣವಾಗಬೇಕಿದೆ. ಾರ್ಕಿಂಗ್ ಸ್ಥಳದಲ್ಲಿ ವಾಹನಗಳ ನಿಲುಗಡೆ ಜಾಗದಲ್ಲಿ ಮೇಲ್ಛಾವಣಿ ಅಳವಡಿಸಬೇಕಿದೆ. ಉಳಿದಂತೆ ಮಳೆನೀರು ಸಂಗ್ರಹಣಾ ವ್ಯವಸ್ಥೆ, ಸಿಸಿಟಿವಿ ಕ್ಯಾಮೆರಾ, ವೈಫೈ, ರೈಲುಗಳ ಮಾಹಿತಿ ನೀಡಲು ಎಲ್‌ಇಡಿ ಪರದೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯಬೇಕಿದೆ. ಇಷ್ಟು ಕಾಮಗಾರಿ ನಡೆಯುತ್ತಿದ್ದರೂ, ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಈ ನಡುವೆಯೂ ರೈಲುಗಳು ನಿತ್ಯವೂ ಸಂಚಾರ ಮಾಡುತ್ತಿದ್ದು, ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿ ಎಂದು ಪ್ರಯಾಣಿಕ ನಾಗೇಂದ್ರ ವಿಜಯವಾಣಿಗೆ ಮಾಹಿತಿ ನೀಡಿದರು.