ಜಿಲ್ಲೆ

ರೈಲು ಡಿಕ್ಕಿ ಹೊಡೆದು ಚಿರತೆ ಸಾವು

ಕುಂದಾಪುರ : ಬೈಂದೂರು ತಾಲೂಕು ನಾಡಾ ಗ್ರಾಮ ಬಡಾಕೆರೆ ರೈಲ್ವೆ ಮೇಲ್ಸೇತುವ ಬಳಿ ಮಂಗಳವಾರ ಬೆಳಗಿನ ಜಾವ ರೈಲು ಡಿಕ್ಕಿ ಹೊಡೆದು ನಾಲ್ಕು ವರ್ಷದ ಕಪ್ಪು ಚಿರತೆ ಮೃಪಟ್ಟಿದೆ.
ಆಹಾರ ಅರಸಿ ಬಂದ ಚಿರತೆ ರೈಲ್ವೆ ಮೇಲ್ಸೇತುವೆ ಬಳಿ ರೈಲು ಬರುತ್ತಿರುವಾಗ ತಪ್ಪಿಸಿಕೊಳ್ಳಲು ಆಗದಿರುವುದೇ ದುರ್ಘಟನೆಗೆ ಕಾರಣ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದು ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಿದರು.