ಚಾಮರಾಜನಗರ: ನಗರದ ರೈಲ್ವೆ ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಅಪರಿಚಿತ ವ್ಯಕ್ತಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ವ್ಯಕ್ತಿಯ ವಯಸ್ಸು ಸುಮಾರು 60-65ವರ್ಷವಾಗಿದ್ದು, 5.2 ಅಡಿ ಎತ್ತರ ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ ಸಾಧಾರಣ ಮೈಕಟ್ಟು ಬಿಳಿ ಚಿಗುರು ಗಡ್ಡ ಮೀಸೆ ಇರುತ್ತದೆ. ಬಲಗೈ ಮೇಲೆ ಗಂಗಾಬಾಯಿ, ಲಕ್ಷ್ಮೀ, ಗದಗ ಬೆಟಗೇರಿ ಎಂಬ ಹಸಿರು ಹಜ್ಜೆ ಗುರುತು ಇರುತ್ತದೆ ಎಂದು ಕಂಡು ಬಂದಿದೆ. ಎಡಗೈ ಮೇಲೆ ಗಂಗಾ, ರಾಜ, ಲಕ್ಷ್ಮೀ ಎಂದು ಕನ್ನಡದಲ್ಲಿ ಬರೆದಿರುವ ಹಸಿರು ಹಜ್ಜೆ ಗುರುತು ಇದ್ದು, ಪಿಂಕ್ ಕಲರ್ ರೆಡಿಮೇಡ್ ತುಂಬುತೋಳಿನ ಶರ್ಟ್, ಮೆರುನ್ ಕಲರ್ ಟೀ ಶರ್ಟ್ ಹಸಿರು ಬಣ್ಣದ ಸೇಫ್ಟಿ ಜಾಕೆಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಸದ್ಯ ಮೃತದೇಹವನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.