ಜಿಲ್ಲೆ

ರೈಲಿಗೆ ಸಿಲುಕಿ 2 ವರ್ಷದ ಚಿರತೆ ಸಾವು

ತುರುವೇಕೆರೆ: ತಾಲೂಕಿನ ದಂಡಿನಶಿವರ ಹೋಬಳಿಯ ಅಮ್ಮಸಂದ್ರ ಸಮೀಪ ಎರಡುವರ್ಷದ ಹೆಣ್ಣು ಚಿರತೆ ಚಲಿಸುವ ರೈಲಿಗೆ ಸಿಲುಕಿ ಮಂಗಳವಾರ ಮುಂಜಾನೆ ಮೃತಪಟ್ಟಿದೆ. ಬೆಳಗ್ಗೆ ಎಂದಿನಂತೆಲೈನ್​ಮೆನ್​ಗಳು ರೈಲ್ವೆ ಹಳಿ ಪರೀಕ್ಷಿಸುವಾಗ ಚಿರತೆ ರೈಲಿಗೆ ಸಿಕ್ಕಿ ಅಸುನೀಗಿರುವುದು ಪತ್ತೆಯಾಗಿದೆ. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಆರ್​ಎಫ್​ಒ ಅರುಣ್​ ಕುಮಾರ್​, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್​,ಅರಣ್ಯ ಗಸ್ತು ಅಧಿಕಾರಿ ರೂಪೇಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಂತರ ಚಿರತೆ ಮರಣೊತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.