ಕಲಬುರಗಿ: ಬಿದ್ದಾಪುರ ಕಾಲನಿ ರೈಲ್ವೆ ಗೇಟ್ ಹತ್ತಿರ ಶುಕ್ರವಾರ ವಿದ್ಯಾರ್ಥಿಯೊಬ್ಬ ಚಲಿಸುವ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೀರೇಶ ಸ್ವಾಮಿ (೧೬) ಮೃತಪಟ್ಟವ. ಹೀರಾಪುರ ನಿವಾಸಿಯಾಗಿದ್ದ ಆತ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ. ಟ್ಯೂಷನ್‌ಗೆ ಬಿದ್ದಾಪುರ ಕಾಲನಿಗೆ ಬಂದಿದ್ದ. ತಲೆನೋವು ಎಂದು ಹೇಳಿ ಕ್ಲಾಸ್‌ನಿಂದ ಹೊರಬಂದು ರೈಲಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ಪಿಎಸ್‌ಐ ವೀರಭದ್ರ ಸ್ಥಳಕ್ಕೆ ಭೇಟಿ ನೀಡಿದ್ದು, ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು: ನೆಹರು ಗಂಜ್ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.