ಜಿಲ್ಲೆ

ರೈತರೊಂದಿಗೆ ಭತ್ತ ನಾಟಿ ಮಾಡಿದ ಶಾಸಕ

ಕುಣಿಗಲ್​: ತಾಲೂಕಿನ ಅಮೃತೂರು ಹೋಬಳಿ ವಳಗೆರೆಪುರದಲ್ಲಿ ಶಾಸಕ ಡಾ.ರಂಗನಾಥ್​ ಕೆಸರು ಗದ್ದೆಗೆ ಇಳಿದು ರೈತ ಮಹಿಳೆಯರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ರೆತರಿಗೆ ಪ್ರೋತ್ಸಾಹ ನೀಡಿದರು.

ಗದ್ದೆನಾಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾಕೋರ್ನಹಳ್ಳಿ ಹಾಗೂ ಮಂಗಳಾ ಜಲಾಶಯದಿಂದ ರೈತರ ಜಮೀನಿಗೆ ನೀರು ಹರಿಸಲಾಗುತ್ತಿದೆ. ಈ ಸಂಬಂಧ ರೆತರು ಗದ್ದೆ ಹದ ಮಾಡಿ, ನಾಟಿ ಮಾಡುತ್ತಿರುವುದು ಗೊತ್ತಾಯಿತು. ಹಾಗಾಗಿ ಕೃಷ್ಟಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನೆ. ರೈತರು 64 ತಳಿ ಭತ್ತದ ರೈರು ನಾಟಿ ಮಾಡುತ್ತಿದ್ದಾರೆ. ಕೃಷಿಯಲ್ಲಿ ಸಿಗುವ ನೆಮ್ಮದಿ, ಶಾಂತಿ ಎಲ್ಲಿಯೂ ಸಿಗುವುದಿಲ್ಲ ಎಂದು ತಿಳಿಸಿದರು.

ನೆರವಿಗೆ ಬರಬೇಕು: ಈ ಹಿಂದೆ ರಸಗೊಬ್ಬರ ಒಂದು ಮೂಟೆಗೆ 300ರಿಂದ 400 ರೂ. ಇತ್ತು. ಈಗ 1500 ರೂಪಾಯಿಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ರೆತರಿಗೆ ಬೇಕಾಗುವ ಗೊಬ್ಬರ, ಕಷಿ ಸಲಕರಣೆಗಳನ್ನು ಕಡಿಮೆ ಬೆಲೆಗೆ ನೀಡುವ ಮೂಲಕ ನೆರವಾಗಬೇಕು ಎಂದು ಶಾಸಕರು ಆಗ್ರಹಿಸಿದರು.

ಮಹಿಳಾ ಕಾಂಗ್ರೇಸ್​ ಅಧ್ಯೆ ಸುಮತಿ, ಮುಖಂಡ ಅಡಿಟರ್​ ನಾಗರಾಜು ಇದ್ದರು.