ಜಿಲ್ಲೆ

ರೈತರು ಪುಕ್ಕಟೆಯಾಗಿ ಹಣ ಕೇಳುತ್ತಿಲ್ಲ

ಕಬ್ಬೂರು: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ರೈತರು ಪಟ್ಟಣದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆ ಸಂಚಾರ ತಡೆದು ಘೋಷಣೆ ಕೂಗಿ ಪ್ರತಿಭಟಿಸಿದರು.

ಹೋರಾಟದಲ್ಲಿ ಭಾಗಿಯಾದ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರ ಮುಂದಾಳತ್ವ ವಹಿಸಿ ಟನ್ ಕಬ್ಬಿಗೆ 3,500 ರೂ. ದರ ಕೊಡಿಸಬೇಕು. ರೈತರು ಪುಕ್ಕಟೆಯಾಗಿ ಹಣ ಕೇಳುತ್ತಿಲ್ಲ. ಬೆವರು ಸುರಿಸಿ ಬೆಳೆದ ಕಬ್ಬಿಗೆ ಹಣ ಕೇಳುತ್ತಿದ್ದಾರೆ. ಸರ್ಕಾರದ ಬಳಿ ಗ್ಯಾರಂಟಿಗಳಿಗೆ ಕೊಡಲು ಹಣವಿದೆ. ಆದರೆ, ರೈತರಿಗೆ ಕೊಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಸ್ವಯಂಪ್ರೇರಿತವಾಗಿ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ್ ಮಾಡಿ ರೈತರಿಗೆ ಸಾಥ್ ನೀಡಿದರು. ಪಟ್ಟಣದ ಎಲ್ಲ ಸಂಘಟನೆಗಳು ಭಾಗಿಯಾಗಿ ಬೆಂಬಲಿಸಿದರು.

ರಾಜ್ಯ ರೈತಸಂಘದ ಕಾರ್ಯದರ್ಶಿ ರಾಜು ಪವಾರ, ಸುಭಾಷಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಮಿಲನ್ ಪಾಟೀಲ, ಕೆಂಪ್ಪಣ್ಣ ಕಾಮಗೌಡ, ಡಾ.ಆರ್.ಕೆ.ಬಾಗಿ, ಸದಾಶಿವ ಚಿಮ್ಮಟ, ರಮೇಶ ಬೆಲ್ಲದ, ಮಹಾಲಿಂಗ ಹಂಜಿ, ವಿಠ್ಠಲ ಕುಕನೂರ, ಅಶೋಕ ದಂಡಿನವರ, ರವಿ ಕುಂಬೋಜ, ಶ್ರೀಶೈಲ ಹಂಜಿ, ಎಂ.ಕೆ.ಪೂಜೇರಿ, ಶಂಕರ ಚೌಗಲಾ, ಸಿದ್ರಾಮ ಕರಗಾವಿ, ಅಮೀರ್ ಮುಲ್ತಾನಿ, ಸುಭಾಸ ಬಡಿಗೇರ, ಬಿ.ಎಸ್.ಜಿಪ್ರೆ, ರಾಮಪ್ಪ ಶಿರಗಪ್ಪಗೋಳ ಇತರರಿದ್ದರು.