ಮುಗಳಖೋಡ: ರಾಯಬಾಗ ತಾಲೂಕಿನ ಅತ್ಯಂತ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಮುಗಳಖೋಡ, ಪಾಲಬಾವಿ, ಕಪ್ಪಲಗುದ್ದಿ ಹಾಗೂ ಹಂದಿಗುಂದ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿ, ರಾಯಬಾಗ ತಾಲೂಕಿನಾದ್ಯಂತ ೭೧೪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ಅವುಗಳಿಗೆ ೩೮೫ ಕೋಟಿ ರೂ. ಪತ್ತಿನ ಸಾಲ ಬಿಡುಗಡೆ ಮಾಡಿ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.
ಶ್ರೀ ಸಿದ್ಧರಾಮೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಅಧ್ಯಕ್ಷ ಸುರೇಶ ಹೊಸಪೇಟಿ ಮಾತನಾಡಿ, ಅಪ್ಪಾಸಾಹೇಬ ಕುಲಗುಡೆ ಅವರು ರೈತರು ಹಾಗೂ ಸಂಘಗಳ ಅಭಿವೃದ್ಧಿ ಕಾರ್ಯಗಳಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.
ಬ್ಯಾಂಕ್‌ನ ನಿರೀಕ್ಷಕ ಭರತೇಶ ಬಾಬಣ್ಣವರ, ಶಿವಬಸು ಕಾಪ್ಸೆ, ಪರಮಾನಂದ ಹೊಸಪೇಟಿ, ಸಿದ್ದಣ್ಣ ಅಂಗಡಿ, ಭೀಮರಾಯ ಕೇತಗೌಡರ, ಶ್ರೀಕಾಂತ ಕೇತಗೌಡರ, ಸಂಜಯ ಯಡವಣ್ಣವರ ಇತರರಿದ್ದರು.