ಪವನ ದೇಶಪಾಂಡೆ ಕೊಡೇಕಲ್
ಕೊಡೇಕಲ್, ಹಗರಟಗಿ, ರಾಜನಕೋಳೂರ ಸೇರಿ ಇನ್ನಿತರ ಗ್ರಾಮಗಳಲ್ಲಿ ಈ ವರ್ಷ 24 ಎಕರೆ ಪ್ರದೇಶದಲ್ಲಿ ಈ ಬಿಜ ಬಿತ್ತನೆ ಮಾಡಲಾಗಿದೆ. ಬೆಳೆಯು ಸಮೃದ್ಧವಾಗಿ ಬೆಳೆದು ಒಳ್ಳೆಯ ಸುಹಾಸನೆ ಬೀರುತ್ತಿದೆ. ಇದೀಗ ರಾಶಿ ಹಂತಕ್ಕೆ ಬಂದಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಇದ್ದಾರೆ ರೈತರು.
ಇತ್ತೀಚಿನ ವರ್ಷಗಳಲ್ಲಿ ಅಜಿವಾನ್ವೊಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಹೆಚ್ಚಾಗಿ ಈ ಬೆಳೆ ಬೆಳೆಯಲಾಗುತ್ತಿದೆ. ವಿಷಯ ತಿಳಿದು ಮಾಹಿತಿ ಪಡೆದ ಕೆಲ ರೈತರು ತಮ್ಮ ಹೊಲದಲ್ಲಿ ಬಿತ್ತನೆ ಮಾಡಿ ಹೊಸತನಕ್ಕೆ ನಾಂದಿ ಹಾಡಿದ್ದರು. ನಾಲ್ಕು ತಿಂಗಳ ಬೆಳೆಯಾಗಿರುವ ಅಜಿವಾನ್ ಕಡಿಮೆ ಇಳುವರಿ ಪಡೆದಿದ್ದರೂ ಕೂಡಾ ಕಡಿಮೆ ವೆಚ್ಚದಲ್ಲಿ ಉತ್ತಮ ಆದಾಯ ಪಡೆದುಕೊಳ್ಳಬಹುದು ಎಂಬ ವಿಶ್ವಾಸದಲ್ಲಿದ್ದಾರೆ.
ಸಾಮಾನ್ಯವಾಗಿ ಈ ಬೆಳೆ ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರತಿ ಕ್ವಿಂಟಲ್ಗೆ 15ರಿಂದ 20 ಸಾವಿರ ರೂ.ಗೆ ಮಾರಾಟವಾಗುತ್ತದೆ. ಈ ಬೆಲೆ ರೈತರಿಗೆ ಲಭಿಸಿದರೆ ಯಾವುದೇ ನಷ್ಟ ಆಗಲಾರದು ಎಂಬ ಮಾತು ಕೇಳಿಬರುತ್ತಿವೆ. ಇದರಿಂದ ಇನ್ನಷ್ಟು ರೈತರು ಅಜಿವಾನ್ ಬೆಳೆಯಲು ಮುಂದಾಗಲು ಅನುಕೂಲವಾಗಲಿದೆ.