ಚಿಂಚೋಳಿ: ರೈತರಿಗೆ ಸಮರ್ಪಕ ರಸಗೊಬ್ಬರ ವಿತರಿಸುವಂತೆ ಒತ್ತಾಯಿಸಿ ಬಿಜೆಪಿಯಿಂದ ತಹಸಿಲ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ನೇತೃತ್ವ ವಹಿಸಿದ್ದ ಪಕ್ಷದ ತಾಲೂಕು ಅಧ್ಯಕ್ಷ ವಿಜಯಕುಮಾರ ಚೆಂಗಟಾ ಮಾತನಾಡಿ, ರೈತ ವಿರೋಧಿ ರಾಜ್ಯ ಸರ್ಕಾರ ಕಾಳಸಂತೆಯಲ್ಲಿ ರಸಗೊಬ್ಬರ ಮಾರಾಟವಾಗುತ್ತಿದ್ದರೂ ತಡೆಯುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ೮.೭೩ ಲP್ಷÀ ಮೆಟ್ರಿಕ್ ಟನ್ ಗೊಬ್ಬರ ಪೂರೈಸಿದೆ. ಆದರೆ ರೈತರಿಗೆ ವಿತರಿಸುವಲ್ಲಿ ಕಾಂಗ್ರೆಸ್ ಸರ್ಕಾರ ಎಡವಿದೆ. ಕೂಡಲೇ ತಾಲೂಕಿನಾದ್ಯಂತ ಸಮರ್ಪಕ ರಸಗೊಬ್ಬರ ಪೂರೈಸದಿದ್ದರೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಜಿಪಂ ಮಾಜಿ ಸದಸ್ಯ ಗೌತಮ ಪಾಟೀಲï, ಪ್ರಮುಖರಾದ ಸಂತೋಷ ಗಡಂತಿ, ಜಗದೀಶಸಿಂಗ್ ಠಾಕೂರ್, ಅಶೋಕ ಚವ್ಹಾಣ್, ಅನೀಲ ಕಂಟ್ಲಿ, ವೀರೇಶ ಯಂಪಳ್ಳಿ, ಗಿರಿರಾಜ ನಾಟೀಕಾರ, ಭೀಮಶೆಟ್ಟಿ ಮುರುಡಾ, ಕೆ.ಎಂ. ಬಾರಿ, ಶ್ರೀಕಾಂತ ಪಿತ್ತಲ್, ಪ್ರದೀಪ್ ಮೇತ್ರಿ, ಅಮರ ಲೋಡ್ಡನೂರ, ಲೋಕೇಶ ಶೆಳ್ಳಗಿ, ಚಂದ್ರಶೆಟ್ಟಿ ಜಾಧವ್, ಗೋಪಾಲರೆಡ್ಡಿ ಕೊಳ್ಳೂರ್, ರಾಜು ಪವಾರ್ ಇತರರಿದ್ದರು. ಬೇಡಿಕೆಗಳ ಮನವಿಪತ್ರವನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಸಲ್ಲಿಸಲಾಯಿತು.