ಜಿಲ್ಲೆ

ರೈತರಿಗೆ ವರದಾನವಾದ ಚಾಮುಲ್ ; ನಿರ್ದೇಶಕ ಎಚ್.ಎಸ್.ಬಸವರಾಜು ಹೇಳಿಕೆ

ಚಾಮರಾಜನಗರ : ಚಾಮರಾಜನಗರ ಹಾಲು ಒಕ್ಕೂಟ ಮೈಸೂರಿನಿಂದ ಪ್ರತ್ಯೇಕಗೊಂಡಿದ್ದರಿಂದ ಜಿಲ್ಲೆಯ ರೈತರಿಗೆ ವರದಾನವಾಯಿತು ಎಂದು ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಎಚ್.ಎಸ್.ಬಸವರಾಜು ಬಣ್ಣಿಸಿದರು.


ತಾಲೂಕಿನ ನಂಜದೇವಪುರ ಗ್ರಾಮದ ಡೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂದ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಹಾಲು ಒಕ್ಕೂಟ ಮೈಸೂರಿನಿಂದ ವಿಭಜನೆಗೊಂಡು ಚಾಮರಾಜನಗರ ತಾಲೂಕಿನ ಕುದೇರಿನಲ್ಲಿ ಡೇರಿ ಸ್ಥಾಪನೆಯಾಯಿತು. ಹಾಲು ಶೇಖರಣೆಯ ಜತೆಗೆ ಟೆಟ್ರಾ ಪ್ಯಾಕೇಟ್ ಯೂನಿಟ್ ಟಕ, ನಂದಿನಿ ಸಿಹಿ ಉತ್ಪನ್ನಗಳ ತಯಾರಿಕೆ ಘಟಕ ಸೇರಿದಂತೆ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಹಾಲು ಒಕ್ಕೂಟ ನಿರ್ವಾಣವಾಗಿದೆ. ಇದು ಜಿಲ್ಲೆಯ ಅಭಿವದ್ದಿಗೆ ಪೂರಕವಾಯಿತು ಎಂದರು.


ಸಭೆಯಲ್ಲಿ ಸಂದ ಕಾರ್ಯದರ್ಶಿ ಎನ್.ಬಿ. ಮಹದೇವಕುವಾರ್ ವಾರ್ಷಿಕ ವರದಿಯನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ನಂಜೇದೇವನಪುರ ದಾಸೋಹ ಮಠಾಧ್ಯಕ್ಷ ಶ್ರೀರಾಜೇಂದ್ರಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಚಾಮುಲ್ ನಿರ್ದೇಶಕ ಸದಾಶಿವಮೂರ್ತಿ, ಸಂದ ಅಧ್ಯಕ್ಷ ಎನ್.ಎಸ್.ಶ್ರೀಕಂಠಕುವಾರ್, ಎನ್.ಪಿ.ಶಾಂತು, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಸೋಮಣ್ಣ, ವಿಸ್ತಾರಣಾಧಿಕಾರಿ ದಯಾನಂದ, ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಗಳ ನೌಕರರ ಸಂದ ಅಧ್ಯಕ್ಷ ಎನ್.ಪಿ.ಶಾಂತು, ಉಪಾಧ್ಯಕ್ಷ ವಿರೂಪಾಕ್ಷ, ನಿರ್ದೇಶಕ ಗುರುಮಲ್ಲಪ್ಪ ಮತ್ತು ಇತರರು ಉಪಸ್ಥಿತರಿದ್ದರು.