ಜಿಲ್ಲೆ

ರೈತರಿಗೆ ಮೂಲ ಸೌಕರ್ಯ ಒದಗಿಸಿ

ಕಲಬುರಗಿ: ಸರ್ಕಾರ ರೈತರಿಂದ ಸಾರ್ವಜನಿಕ ಉz್ದÉÃಶಕ್ಕೆ ಭೂಮಿ ಖರೀದಿಸಿದರೆ ಅವರಿಗೆ ಸಾರ್ವಜನಿಕ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದರು.
ಸರ್ಕಾರ ರೈತರಿಂದ ಶಾಲೆ-ಕಾಲೇಜು, ಆಸ್ಪತ್ರೆ ಕಟ್ಟಡ, ವಿವಿಧ ಕಚೇರಿ ಸೇರಿದಂತೆ ಸಾರ್ವಜನಿಕ ಉz್ದÉÃಶಗಳಿಗೆ ಭೂಮಿ ಖರೀದಿ ಮಾಡಿದಾಗ ಅವರಿಗೆ ಮುದ್ರಾಂಕ ಶುಲ್ಕದ ವಿನಾಯಿತಿ ಸೇರಿ ಮೂಲಸೌಕರ್ಯ ಒದಗಿಸಬೇಕು ಎಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಸರ್ಕಾರ ಸಾರ್ವಜನಿಕ ಹಿತದೃಷ್ಟಿಯಿಂದ ಉದ್ಯಮಿಗಳ ಕೈಗಾರಿಕೆ ಸ್ಥಾಪನೆ, ಕ್ಯಾನಲï ನಿರ್ಮಾಣ ಸಂದರ್ಭದಲ್ಲಿ ರೈತರಿಂದ ಪಡೆದ ಜಮೀನಿಗೆ ಪರಿಹಾರವಾಗಿ ಭೂಪರಿಹಾರ, ನೌಕರಿ, ಮುದ್ರಾಂಕ ಶುಲ್ಕ ವಿನಾಯಿತಿ, ಯೋಜನಾ ನಿರಾಶ್ರಿತರೆಂದು ಪರಿಗಣಿಸಲಾಗುತ್ತದೆ. ಆದರೆ, ವಿವಿಧ ಉz್ದÉÃಶಕ್ಕೆ ರೈತರಿಂದ ನೇರವಾಗಿ ಜಮೀನು ಖರೀದಿಸಿದಲ್ಲಿ ಯಾವುದೇ ಪರಿಹಾರ ಸೌಲಭ್ಯ ಸಿಗುವುದಿಲ್ಲ ಎಂದರು.
ಭೂಮಿ ನೀಡುವ ರೈತರು ವಲಸೆ ಹೋಗಿ ತಮ್ಮ ವಿಳಾಸವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಸರ್ಕಾರ ರೈತರಿಂದ ನೇರವಾಗಿ ಜಮೀನು ಖರೀದಿಸಿದಾಗಲೂ ಭೂಪರಿಹಾರ, ನೌಕರಿ ನೀಡುವ ಜತೆಗೆ ಯೋಜನಾ ನಿರಾಶ್ರೀತರೆಂದು ಪರಿಗಣಿಸಬೇಕು. ರೈತರು ಬೇರೆ ಕಡೆ ಭೂಮಿ ಖರೀದಿಸಿದರೆ ಮುದ್ರಾಂಕ ಶುಲ್ಕದ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಕಿಸಾನ್ ಸಭಾ ಜಿಲ್ಲಾ ಘಟಕದ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ ಮಾತನಾಡಿ, ನಗರದಲ್ಲಿ ರಸ್ತೆಗಳು ಹದಗೆಟ್ಟಿವೆ. ಎ¯್ಲÉಡೆ ಧೂಳು ಆವರಿಸಿದೆ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ. ಕೂಡಲೇ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ರೈತ ಕೆ.ಪ್ರಧಾನಿ, ರಾಮನಗೌಡ ದೇಸಾಯಿ ಇತರರಿದ್ದರು.