ಬಸವಕಲ್ಯಾಣ: ಜಿಲ್ಲೆಯಲ್ಲಿ ರೈತ ಸಂಘಟನೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪದಾಧಿಕಾರಿಗಳು ಶ್ರಮಿಸಬೇಕು. ಸಂಕಷ್ಟದಲ್ಲಿ ಇರುವ ರೈತರಿಗೆ ಬೆನ್ನೆಲುಬಾಗಿ ನಿಂತು ಸಕರ್ಾರದಿಂದ ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಸಲಹೆ ನೀಡಿದರು.
ನಗರದ ರೈತ ಭವನದಲ್ಲಿ ಗುರುವಾರ ರಾಜ್ಯ ರೈತ ಸಂಘ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಾಸಿಕ ಸಭೆಯ ನೇತೃತ್ವ ವಹಿಸಿ ಮಾತನಾಡಿ, ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿ ದಿನ ದೂಡುತ್ತಿದ್ದಾರೆ. ಸಕರ್ಾರ ಕೂಡಲೇ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಕಾಯರ್ಾಧ್ಯಕ್ಷ ಶ್ರೀಮಂತ ಬಿರಾದಾರ್ ಮಾತನಾಡಿ, ಬಿಎಸ್ಎಸ್ಕೆಗೆ ಕಬ್ಬು ಪೂರೈಸಿದ ರೈತರ ಹಣ ಕೂಡಲೇ ಪಾವತಿಸಬೇಕು. ಜಿಲ್ಲೆಯ ಎಲ್ಲ ಸಕ್ಕರೆ ಕಾಖರ್ಾನೆಯ ವಾಷರ್ಿಕ ಮಹಾ ಸಭೆಯಲ್ಲಿ ಕಬ್ಬಿನ ದರ ನಿಗದಿ ಮಾಡಿ ಸಭೆ ನಡೆಸಬೇಕೆಂದು ಆಗ್ರಹಿಸಿದರು.
ಬೆಳೆ ವಿಮೆ ಮಾಡಿಸಿದ ರೈತರಿಗೆ ಬಪರಿಹಾರ ಕೊಡಿಸುವ ನಿಟ್ಟಿನಲ್ಲಿ ಸಕರ್ಾರದ ಮೂಲಕ ವಿಮೆ ಕಂಪನಿ ಮೇಲೆ ಒತ್ತಡ ಹೇರಬೇಕು. ತೆಲಂಗಾಣ ಮಾದರಿಯಲ್ಲಿ ಬೀದರ್ ಜಿಲ್ಲೆಯ ರೈತರ ಪ್ರತಿ ಎಕರೆಗೆ ಪ್ರೋತ್ಸಾಹಧನ ಕೊಡಬೇಕು. ಕಾಡು ಪ್ರಾಣಿಗಳ ಹಾವಳಿ ರಕ್ಷಿಸಿಲು ಪ್ರೋತ್ಸಾಹ ಧನದಲ್ಲಿ ತಂತಿ ಬೇಲಿ ಅಳವಡಿಸಿಕೊಳ್ಳಲು ಸಕರ್ಾರ ಅನುವು ಮಾಡಿಕೊಡಬೇಕು ಎಂದರು.
ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಸುಧೀರ್ಘ ಚಚರ್ೆ ನಡೆಸಲಾಯಿತು. ಕಾಶಪ್ಪ ಶೇರಿಕಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಗೌರವಾಧ್ಯಕ್ಷ ಚಂದ್ರಶೇಖರ ಜಮಖಂಡಿ ಪ್ರಾಸ್ತಾವಿಕ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಶೇಷರಾವ ಕಣಜಿ, ಭಾಲ್ಕಿ ತಾಲೂಕು ಅಧ್ಯಕ್ಷ ಬಾಬುರಾವ ಜೋಳದಾಬಕೆ, ಔರಾದ್ನ ಪ್ರಕಾಶ ಬಾವಗೆ, ಬೀದರ್ನ ನಾಗಯ್ಯ ಸ್ವಾಮಿ, ಕಮಲನಗರದ ಪ್ರವೀಣ ಕುಲಕಣರ್ಿ, ಜಿಲ್ಲಾ ಉಪಾಧ್ಯಕ್ಷ ಶಂಕ್ರಪ್ಪ ಪಾರಾ, ಜಿಲ್ಲಾ ಪ್ರಧಾನ ಕಾರ್ಯದಶರ್ಿ ದಯಾನಂದ ಸ್ವಾಮಿ, ಪ್ರಮುಖರಾದ ಗ್ಯಾನೋಬಾ ಜಾಧವ್, ರವಿ ಬೇಲೂರೆ, ಸಿದ್ರಾಮಪ್ಪ ಬಾಲಕುಂದೆ, ಜೈಪ್ರಕಾಶ ಸದಾನಂದೆ, ಶ್ರೀಮಂತ ಮಹಾಜನ, ನಾಗಶೆಟ್ಟಿ ಪಂಢರಗೇರಾ, ದಯಾನಂದ ಹಳ್ಳೆ, ಸಿದ್ದು ಶೇರಿಕಾರ, ಗುಂಡಪ್ಪ ಇಂಚೂರೆ, ಚಂದ್ರಕಾಂತ ಮಾಸ್ತರ, ಮಡಿವಾಳಪ್ಪ ಪಾಟೀಲ್, ಬಾಬು ಕಾಂಬಳೆ, ಚಂದ್ರಪ್ಪ ಮೋಳಕರೆ ಇತರರಿದ್ದರು.
ಸುಭಾಷ ರಗಟೆ ತಾಲೂಕು ಅಧ್ಯಕ್ಷ: ರೈತ ಸಂಘದ ತಾಲೂಕು ನೂತನ ಅಧ್ಯಕ್ಷರಾಗಿ ಸುಭಾಷ ರಗಟೆ ಅವರನ್ನು ನೇಮಕ ಮಾಡಲಾಯಿತು. ಸಂಘಟನೆ ಬಲಗೊಳಿಸುವ ಉದ್ದೇಶದಿಂದ ಸಭೆಯಲ್ಲಿ ಎಲ್ಲರ ಸಮ್ಮತಿ ಮೇರೆಗೆ ತಾಲೂಕು ಮತ್ತು ನಗರ ಘಟಕದ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ರೇವಣಸಿದ್ದಪ್ಪ ಚಿಕನಾಗಾಂವ (ತಾಲೂಕು ಪ್ರಧಾನ ಕಾರ್ಯದಶರ್ಿ), ಮಲ್ಲಿನಾಥ ಮಂಠಾಳೆ (ನಗರ ಅಧ್ಯಕ್ಷ), ಬಸವರಾಜ ನೇತೆ (ಉಪಾಧ್ಯಕ್ಷ).