ಬಸವಕಲ್ಯಾಣ ತಾಲೂಕಿನ ಪರ್ತಾಪುರ ಗ್ರಾಮದಲ್ಲಿ ಬುಧವಾರ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆಗೆ ಶಾಸಕ ಶರಣು ಸಲಗರ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ, ತಹಸೀಲ್ದಾರ ಡಾ.ದತ್ತಾತ್ರೇಯ ಗಾದಾ, ಸೂರ್ಯಕಾಂತ ಬಿರಾದಾರ, ಗೌತಮ, ಖಂಡೇರಾವ್ ಕುಲಕರ್ಣಿ, ಗೋವಿಂದರೆಡ್ಡಿ ಪಾಟೀಲ್, ನಾಗಶೆಟ್ಟಿ, ವಿಕಾಸ ಸೂರ್ಯವಂಶಿ, ಅನೀಲಕುಮಾರ ಕುಲಕರ್ಣಿ, ಸರಸ್ವತಿ ಬಿರಾದಾರ, ಸುಭಾಷ ರಗಟೆ, ಶ್ರೀಮಂತ ಮಹಾಜನ ಇತರರಿದ್ದರು. 
ಜಿಲ್ಲೆ

ರೈತರಿಗೆ ಬಿತ್ತನೆ ಬೀಜದ ಕೊರತೆ ಆಗದು

ಬಸವಕಲ್ಯಾಣ: ಮುಂಗಾರು ಮಳೆ ಎರಡು ವಾರ ಮುನ್ನವೇ ಪ್ರಾರಂಭವಾಗಿದ್ದು, ಕೃಷಿ ಚಟುವಟಿಕೆ ಆರಂಭವಾಗಿದ್ದು, ರೈತರಿಗೆ ಬೀಜ, ರಸಗೊಬ್ಬರದ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದೆಂದು ಶಾಸಕ ಶರಣು ಸಲಗರ ಹೇಳಿದರು.

ಪರ್ತಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕೃಷಿ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ೨೦೨೫-೨೬ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೇ ತಿಂಗಳಲ್ಲಿ ದಾಖಲೆಯ ಮಳೆಯಾಗಿದೆ. ಆದರೆ ಬಿತ್ತನೆಗೆ ಪೂರಕ ವಾತಾವರಣ ನೋಡಿಕೊಂಡು ಬಿತ್ತಬೇಕು, ಸೋಯಾಬೀನ್ ಜತೆಗೆ ತೊಗರಿ, ಉದ್ದು, ಹೆಸರು ಬೆಳೆಯಲು ಆಸಕ್ತಿ ವಹಿಸಬೇಕು ಎಂದು ಸಲಹೆ ನೀಡಿದರು.

ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ೧೮ ಸಾವಿರ ಕ್ವಿಂಟಾಲ್ ಸೋಯಾ, ಅವರೆ ಬೇಡಿಕೆ ಇದ್ದು, ಈಗಾಗಲೇ ೯೫೦೦ ಕ್ವಿಂಟಾಲ್ ದಾಸ್ತಾನು ಮಾಡಲಾಗಿದೆ. ತೊಗರಿ, ಉದ್ದು, ಹೆಸರು ಬೀಜದ ಕೊರತೆ ಇಲ್ಲ. ಈಗಾಗಲೇ ದಾಸ್ತಾನು ಮಾಡಲಾಗಿದೆ. ರೈತರಿಗೆ ಬೇಕಿರುವ ಅಗತ್ಯ ಪ್ರಮಾಣದ ಬೀಜ ಸಮಯಕ್ಕೆ ಪೂರಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಸುಭಾಷ ರಗಟೆ ಮಾತನಾಡಿದರು. ಉಪ ಕೃಷಿ ನಿರ್ದೇಶಕ ಸೂರ್ಯಕಾಂತ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಶೋಭಾ ಮೇತ್ರೆ ಅಧ್ಯಕ್ಷತೆ ವಹಿಸಿದ್ದರು, ತಹಸೀಲ್ದಾರ್ ಡಾ.ದತ್ತಾತ್ರೇಯ ಗಾದಾ, ಗ್ರಾಪಂ ಉಪಾಧ್ಯಕ್ಷ ಖಂಡೇರಾವ ಕುಲಕರ್ಣಿ, ಕೃಷಿಕ ಸಮಾಜ ಅಧ್ಯಕ್ಷ ಗೋವಿಂದರೆಡ್ಡಿ ಪಾಟೀಲ, ಉಪಾಧ್ಯಕ್ಷ ನಾಗಶೆಟ್ಟಿ, ವಿಕಾಸ ಸೂರ್ಯವಂಶಿ, ಭಾನುದಾಸ, ಪಿಕೆಪಿಎಸ್ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ, ಉಪಾಧ್ಯಕ್ಷೆ ಸರಸ್ವತಿ ಬಿರಾದಾರ, ರೈತ ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ, ಶ್ರೀಮಂತ ಮಹಾಜನ, ಇಲಾಖೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಶ್ರೀಕೃಷ್ಣಾ ಪಾಟೀಲ್ ಇತರರಿದ್ದರು. ಸಹಾಯಕ ಕೃಷಿ ನಿರ್ದೇಶಕ ಗೌತಮ ಸ್ವಾಗತಿಸಿದರು. ಭೀಮಶಂಕರ ನಿರೂಪಣೆ ಮಾಡಿದರು.