ವಿಜಯಪುರದ ತಾಲೂಕಿನ ಕಗ್ಗೋಡದ ರಾಮನಗೌಡ ಬಾ. ಪಾಟೀಲ ಗೋರಕ್ಷಾ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಿಸಾನ್‌ಗೋಷ್ಠಿಯನ್ನು ಶ್ರೀ ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಶಾಸಕ ದೇವಾನಂದ ಚವ್ಹಾಣ್, ಜಿಪಂ ಕೃಷಿ ಹಾಗೂ ಕೈಗಾರಿಕೆಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ, ಕೃಷಿ ಇಲಾಖೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ, ಬಸಯ್ಯ ಹಿರೇಮಠ ಇನ್ನಿತರರಿದ್ದಾರೆ.  
ಜಿಲ್ಲೆ

ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸಿ:ಸಂಗನಬಸಪ್ಪ ಸಜ್ಜನ

ವಿಜಯಪುರ: ಅವಶ್ಯವಿಲ್ಲದ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ನೀಡುವುದರ ಬದಲಾಗಿ ವಾಸ್ತವಿಕವಾಗಿ ರೈತರಿಗೆ ಅತ್ಯಗತ್ಯವಾಗಿರುವ ಅವಶ್ಯಕತೆಗಳನ್ನು ಅಭ್ಯಸಿಸಿ ಕಾರ್ಯಕ್ರಮಗಳನ್ನು ರೂಪಿಸಿದರೆ ಸಹಾಯವಾಗುತ್ತದೆ ಎಂದು ಶ್ರೀ ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ ಹೇಳಿದರು.
ತಾಲೂಕಿನ ಕಗ್ಗೋಡದ ರಾಮನಗೌಡ ಬಾ. ಪಾಟೀಲ ಗೋರಕ್ಷಾ ಕೇಂದ್ರದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಬುಧವಾರ ಹಮ್ಮಿಕೊಂಡಿದ್ದ ಕಿಸಾನ್‌ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಸರ್ಕಾರದ ಯೋಜನೆಗಳನ್ನು ತಾವು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳತ್ತಿದ್ದಾರೆ ಎನ್ನುವುದನ್ನು ಆತ್ಮಾವಲೋಕ ಮಾಡಿಕೊಳ್ಳಬೇಕಾಗಿದೆ. ವ್ಯವಸಾಯವೇ ಅತ್ಯಂತ ಶ್ರೇಷ್ಠವಾದ ಉದ್ಯೋಗವಾಗಿದ್ದು ಇಡೀ ಪ್ರಪಂಚವನ್ನೆ ಸಾಕಿ ಸಲಹುವ ಸಾಮರ್ಥ್ಯ ಹೊಂದಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಯೋಗ್ಯವಾದ ಬೆಲೆ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಶಾಸಕ ದೇವಾನಂದ ಚವ್ಹಾಣ್ ಮಾತನಾಡಿ, ರೈತನೇ ನಿಜವಾದ ಬುದ್ಧಿ ಜೀವಿ ಹಾಗೂ ನಿಜವಾದ ಶ್ರೀಮಂತ. ರೈತರಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸಿದಲ್ಲಿ, ರೈತನೇ ಸರ್ಕಾರಕ್ಕೆ ಸಾಲ ನೀಡುವಷ್ಟು ಸಾಮರ್ಥ್ಯ ಹೊಂದಿದ್ದಾನೆ. ಆದರೆ ನಾವೆಲ್ಲರೂ ರೈತನಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ವಿಲರಾಗಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಆತ್ಮ ಯೋಜನೆಯಡಿಯಲ್ಲಿ ಕೃಷಿ ಹಾಗೂ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ಸಿದ್ದಪ್ಪ ಭೂಸಗೊಂಡ, ಬಸಗೊಂಡ ಶಿರಮಗೊಂಡ, ಶಿವಸಿದ್ದ ಅವಜಿ ಹಾಗೂ ಸಂಗಪ್ಪ ಮೂಡಗಿ ಅವರಿಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಪಂ ಕೃಷಿ ಹಾಗೂ ಕೈಗಾರಿಕೆಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಪಾಟೀಲ, ಕೃಷಿ ಇಲಾಖೆ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ. ರಾಜಶೇಖರ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಸ್.ಬಿ.ಕಲಘಟಗಿ, ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಕಾಶ ಚವ್ಹಾಣ್, ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೆಶಕ ಡಾ.ಅರಕೇರಿ, ಆತ್ಮ ಯೋಜನೆ ಉಪ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ, ಡಾ. ಎಸ್.ಎಂ. ವಸದ, ಡಾ. ಬಿ.ಟಿ. ನಾಡಗೌಡ, ಡಾ. ಎಚ್.ಎಸ್.ಪ್ರಕಾಶ, ಡಾ.ಸಿದ್ದಣ್ಣ ಠೋಕೆ ಹಾಗೂ ಡಾ. ಎ.ಎಂ. ನದಾ, ಬಸಯ್ಯ ಹಿರೇಮಠ, ಸದಾನಂದ ದೇಸಾಯಿ, ಶಶಿಧರ ಹಕ್ಕಾಪಕ್ಕಿ, ಸಿದ್ರಾಮಪ್ಪ ಉಪ್ಪಿನ ಇನ್ನಿತರರಿದ್ದರು.