ಜಿಲ್ಲೆ

ರೈತರಿಂದ ಭದ್ರಾ ಕಾಮಗಾರಿ ವೀಕ್ಷಣೆ

ಚಿತ್ರದುರ್ಗ: ಜಿಲ್ಲೆಯ ರೈತರು ಸೋಮವಾರ ಚಿಕ್ಕಮಗಳೂರು ಜಿಲ್ಲೆ ಮುತ್ತಿನಕೊಪ್ಪ, ಅಬ್ಬಿನಹೊಳಲಿಗೆ ತೆರಳಿ ಭದ್ರಾ ಕಾಮಗಾರಿ ವೀಕ್ಷಿಸಿದರು.
ಮುತ್ತಿನಕೊಪ್ಪದ ಪ್ಯಾಕೇಜ್-1 ಹಾಗೂ ಅಬ್ಬಿನಹೊಳಲು ಬಳಿ ಕಾಮಗಾರಿಗಳನ್ನು ವೀಕ್ಷಿಸಿದ ರೈತರು, ಮುತ್ತಿನಕೊಪ್ಪ ಸಮೀಪ 2 ಕಡೆ ಲಿಫ್ಟ್ ಕಾಮಗಾರಿಗಳು ಬಾಕಿ ಇರುವುದನ್ನು ಗಮನಿಸಿದರು.
ಭದ್ರಾ ಡ್ಯಾಂಗೆ ಸಂಪರ್ಕ ಕಲ್ಪಿಸುವ ಕೆಲಸ ಅರ್ಧ ಆಗಿದೆ. 22 ಟವರ್‌ಗಳಲ್ಲಿ ಹತ್ತು ಟವರ್‌ಗಳ ನಿರ್ಮಾಣ ಕಾಮಗಾರಿ ಆಗಿದೆ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಹೇಳಿದರು.
ವಿಶ್ವೇಶ್ವರಯ್ಯ ಜಲನಿಗಮದ ಭದ್ರಾಮೇಲ್ದಂಡೆ ಯೋಜನೆ ಉಪವಿಭಾಗದ ಎಇಇ ಎಚ್.ಎನ್.ಗೋವರ್ಧನ್ ಅವರು, ರೈತರಿಗೆ ಕಾಮಗಾರಿ ಕುರಿತು ವಿವರಿಸಿದರು. ಈ ವೇಳೆ ಕಾಮಗಾರಿ ತ್ವರಿತಗೊಳಿಸುವ ಮೂಲಕ ಜಿಲ್ಲೆಗೆ ನೀರು ಹರಿಸುವಂತೆ ರೈತರು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ್,ಮುಖಂಡರಾದ ಅಪ್ಪರಸನಹಳ್ಳಿ ಬಸವರಾಜ್, ಆರ್.ಬಿ.ನಿಜಲಿಂಗಪ್ಪ,ಬೋರೇಶ್, ರವಿ, ಸತೀಶ್, ರಂಗಸ್ವಾಮಿ, ತುಳುಜಮ್ಮ, ಶೋಭಾ, ಬಸವರಾಜಪ್ಪ, ತುಂಗಪ್ಪ ಇದ್ದರು.