ಬಾಗಲಕೋಟೆ : ಬೆಳೆಹಾನಿ ಅಪಾಯ ತಪ್ಪಿಸಲು ರೈತರಲ್ಲಿ ಬೆಳೆ ವಿಮೆ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದು ಸಂಸದ ಪಿ.ಸಿ. ಗದ್ದಿಗೌಡರ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ನೂತನ ಸಭಾಂಗಣದಲ್ಲಿ ಗುರುವಾರ ಜರುಗಿದ ಪ್ರಸಕ್ತ ಸಾಲಿನ ಎರಡನೇ ತ್ರೆÊಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈ ಬಾರಿ ಮೊದಲಿಗಿಂತ ಅಽಕ ಪ್ರಮಾಣದಲ್ಲಿ ಈರುಳ್ಳಿ, ದಾಳಿಂಬೆ ಬೆಳೆಯಲಾಗಿದ್ದು, ರೈತರು ಮೊದಲೇ ಬೆಳೆ ವಿಮೆ ಮಾಡಿಸಿಕೊಂಡಿದ್ದಲ್ಲಿ, ಬೆಳೆ ಹಾನಿಯಂತಹ ಅಪಾಯವನ್ನ ಸಮರ್ಥವಾಗಿ ಎದುರಿಸಬಹುದಾಗಿದೆ ಎಂದರು.
ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕಾಮಗಾರಿ ಸ್ಥಿತಿಗತಿ ಪರಿಶೀಲಿಸಿ, ಕೇಂದ್ರದಲ್ಲಿ ಇದಕ್ಕೆ ಸಂಬAಽಸಿದAತೆ ಅನುದಾನ ಮತ್ತು ಸಂಪನ್ಮೂಲಕ್ಕೆ ಕೊರತೆ ಇರುವದಿಲ್ಲ. ಆದರೆ, ಭೂ ಮಾಲೀಕರ ಕುಟುಂಬ ವಾಜ್ಯ ಮತ್ತು ಇತರೇ ಕೇಸ್ ವಿಚಾರದಿಂದ ಈಗಾಗಲೇ ಯೋಜನೆಯು ವಿಳಂಬವಾಗಿದೆ. ಸ್ಥಳಿಯ ಸಮಸ್ಯೆಗಳನ್ನ ಬೇಗ ಪರಿಹರಿಸಿಕೊಳ್ಳುವಂತೆ ಅವರು ಜಿಲ್ಲಾಡಳಿತ ಮತ್ತು ರೈಲ್ವೆ ಅಽಕಾರಿಗಳಿಗೆ ಸೂಚನೆ ನೀಡಿದರು.
ಜಲಜೀವನ ಮೀಶನ್ ಯೋಜನೆಯಡಿಯಲ್ಲಿ ಪೂರ್ಣಗೊಳಿಸಿರುವಂತಹ ೬೦೮ ಕಾಮಗಾರಿಗಳಲ್ಲಿ ಯಾವುದಾದರೂ ಒಂದರ ಪೈಕಿ ದೂರು ಬಂದರೂ ಕೂಡ ತಕ್ಷಣ ಪರಿಶೀಲಿಸುವ ಕಾರ್ಯವಾಗಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಗಳ ಮೊತ್ತವನ್ನ ಹೆಚ್ಚಳಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು. ಎರಡನೇ ಹಂತದಲ್ಲಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಅಂಕಿ ಸಂಖ್ಯೆಗಳ ಕುರಿತು ಮಾಹಿತಿ ನೀಡುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಪೋಕ್ಸೋ ಪ್ರಕರಣಗಳ ನಿಯಂತ್ರಣಕ್ಕೆ ಸೂಕ್ತ ಜಾಗೃತಿಯು ಅಗತ್ಯವಾಗಿದೆ. ಪ್ರಕರಣಗಳಲ್ಲಿ ಶಿಕ್ಷೆಗೊಳಗಾದವರ ಮತ್ತು ದಂಡದ ಮೊತ್ತದ ಕುರಿತು ಪ್ರಚಾರ ನೀಡಿದಲ್ಲಿ, ಭಯದಿಂದ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಸಂಬAಽಸಿದ ಇಲಾಖೆಗಳು ಜಂಟಿಯಾಗಿ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನಿನ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.
ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳಿಗೆ ಸಾಕಷ್ಟು ಜನರು ನೋಂದಣಿಯಾಗಿದ್ದು, ನಿಜವಾದ ಕಾರ್ಮಿಕರನ್ನ ಗುರುತಿಸಿ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ನೀಡುವ ಕೆಲಸ ಅಽಕಾರಿಗಳಿಂದ ಆಗಬೇಕಿದೆ. ರಾಷ್ಟಿçÃಯ ಹೆದ್ದಾರಿ ಪ್ರಾಽಕಾರದ ಪ್ಯಾಕೆಜ್ ೦೩ ಮತ್ತು ೦೪ರ ಕಾಮಗಾರಿಯ ಪ್ರಗತಿ ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾಽಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.