ಚಿಕ್ಕಮಗಳೂರು ಹೊರವಲಯದ ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜೆ.ಪರಮೇಶ್ವರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಎಂ.ಲೋಹಿತೇಶ್ ಆಯ್ಕೆಯಾಗಿದ್ದು, ಅವರನ್ನು ಭದ್ರಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮAತ್ ಅಭಿನಂದಿಸಿದರು. ಎಚ್.ಪಿ.ಮಂಜೇಗೌಡ, ಮಹಮದ್ ನಯಾಜ್, ಎಂ.ಸಿ.ಶಿವಾನAದ ಸ್ವಾಮಿ, ರಾಮಚಂದ್ರ ಮತ್ತಿತರರಿದ್ದರು. 
ಜಿಲ್ಲೆ

ರೈತರ ಸಂಕಷ್ಟಗಳಿಗೆ ಕೃಷಿ ಪತ್ತಿನ ಸಂಘ ನೆರವಾಗಲಿ

ಚಿಕ್ಕಮಗಳೂರು: ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವಂತೆ ಸಮಯಕ್ಕೆ ಸರಿಯಾಗಿ ಗೊಬ್ಬರ, ಬಿತ್ತನೆ ಬೀಜ ಒದಗಿಸುವ ಮೂಲಕ ರೈತರಿಗೆ ನೆರವಾಗುವ ಕೆಲಸವನ್ನು ಸಹಕಾರಿ ಸಂಘಗಳು ಮಾಡಬೇಕು ಎಂದು ಭದ್ರಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮAತ್ ತಿಳಿಸಿದರು.

ತಾಲೂಕಿನ ಹಿರೇಮಗಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಚ್.ಜೆ.ಪರಮೇಶ್ವರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಎಂ.ಲೋಹಿತೇಶ್ ಬುಧವಾರ ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಸಹಕಾರ ಸಂಘದ ಪದಾಧಿಕಾರಿಗಳು ಸಹಕಾರಿ ತತ್ವವನ್ನು ಮೈಗೂಡಿಸಿಕೊಳ್ಳಬೇಕು. ಸಿಕ್ಕಿರುವ ಅವಕಾಶವನ್ನು ಸದಸ್ಯರು ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲರೂ ಒಂದಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ರೈತರು ಹಾಗೂ ಸಂಘವು ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದರು.

ರೈತರ ಬೆಳೆಗೆ ಪೂರಕವಾಗಲು ಡಿಸಿಸಿ ಬ್ಯಾಂಕ್‌ನಿAದ ಸಾಲಸೌಲಭ್ಯ ಹಾಗೂ ಸರ್ಕಾರದ ಸವಲತ್ತು ಒದಗಿಸಲು ಮುಂದಾಗಬೇಕು. ಕ್ಷೇತ್ರದ ಶಾಸಕರ ತವರುರಾದ ಹಿರೇಮಗಳೂರಿಗೆ ಎಲ್ಲೂ ಚ್ಯುತಿ ಬಾರದಂತೆ ನಿಗಾವಹಿಸಿ ಸಹಕಾರಿ ಸಂಘವು ರೈತರ ಧ್ವನಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಪ್ರಸ್ತುತ ಹಿರೇಮಗಳೂರು ಸಹಕಾರಿ ಸಂಘವು ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದೆ. ಹೀಗಾಗಿ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಅತ್ಯಧಿಕ ಸ್ಥಾನಗಳನ್ನು ಗಳಿಸುವಲ್ಲಿ ಎಲ್ಲರೂ ಶ್ರಮಿಸಬೇಕು. ಎಲ್ಲರ ಬೆಂಬಲದೊAದಿಗೆ ಜಿಲ್ಲೆಯಾದ್ಯಂತ ಗಟ್ಟಿಹೆಜ್ಜೆ ಇಟ್ಟು ಮುನ್ನೆಡೆಯಬೇಕಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಸಹಕಾರಿ ಸಂಘವು ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕಚೇರಿಗೆ ಆಗಮಿಸುವಂಥ ರೈತರು, ಸದಸ್ಯರಿಗೆ ಸಕಾತ್ಮಕವಾಗಿ ಸ್ಪಂದಿಸಿ ಸೌಲಭ್ಯ ಒದಗಿಸ ವಲ್ಲಿ ಮುಂದಾದರೆ ಅಧಿಕಾರ ಸ್ವೀಕರಿಸಿರುವುದು ಸಾರ್ಥಕವಾದಂತಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಹಿರೇಮಗಳೂರು ಸಂಘವು ಕಾಂಗ್ರೆಸ್ ಬೆಂಬಲಿತದಿAದ ಹೆಚ್ಚಿನ ಸ್ಥಾನ ಪಡೆದುಕೊಂಡು ಅಧಿಕಾರ ಚುಕ್ಕಾಣಿ ಹಿಡಿದಿರುವುದು ಸಂತಸದ ಸಂಗತಿ. ಆ ನಿಟ್ಟಿನಲ್ಲಿ ಸೊಸೈಟಿಗೆ ಆಗಮಿಸುವ ಪ್ರತಿಯೊಬ್ಬ ರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸಂಘದಿAದಾಗುವ ಸೌಕರ್ಯವನ್ನು ಒದಗಿಸಿಕೊಡಬೇಕು ಎಂದರು.

ನೂತನ ಅಧ್ಯಕ್ಷ ಎಚ್.ಜೆ.ಪರಮೇಶ್ವರ್ ಮಾತನಾಡಿ, ಸಹಕಾರ ಸಂಘದಲ್ಲಿ ಮೊದಲು ಗುಮಾಸ್ತನಾಗಿ ಕಾರ್ಯನಿರ್ವಹಿಸಿ ಇದೀಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ಕಾಂಗ್ರೆಸ್ ಮುಖಂಡರುಗಳು ಹಾಗೂ ಕ್ಷೇತ್ರದ ಶಾಸಕರ ಬೆಂಬಲವೇ ಕಾರಣ. ಹಾಗಾಗಿ ಸರ್ವ ನಿರ್ದೇಶಕರುಗಳ ಸಹಕಾರದಿಂದ ಮುಂದೆ ಸಂಘವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನAದಸ್ವಾಮಿ, ಕಾಂಗ್ರೆಸ್ ಜಿಲ್ಲಾ ಕಾಂಗ್ರೆಸ್ ರಾಮಚಂದ್ರ, ಸಿಡಿಎ ನಾಮಿನಿ ಸದಸ್ಯರಾದ ರಾಘವೇಂದ್ರ, ಆಶಾ ಬಸವರಾಜ್, ನಿರ್ದೇಶಕರಾದ ಎಂ.ಜಗದೀಶ್, ನೀಲಶೆಟ್ಟಿ, ಎಚ್.ವಿ.ಅಶೋಕ್, ಕೆ.ಆರ್.ಆನಂದ್‌ರಾಜ್ ಅರಸ್, ಎಲ್.ಜೆ.ಮೋಹನ್, ತಮ್ಮೇಗೌಡ, ಚಂದ್ರಕಲಾ, ಪ್ರೇಮ, ಎಚ್.ಜೆ.ಸಚಿನ್, ಮುಖಂಡರಾದ ಜಗದೀಶ್, ಚುನಾವಣಾಧಿಕಾರಿ ಮಹಾಂತೇಶ್ ಮತ್ತಿತರರಿದ್ದರು.