ಕೆಂಭಾವಿ: ಸಹಕಾರ ತತ್ವದಲ್ಲಿ ನಂಬಿಕೆಯಿಟ್ಟು ರೈತರ ಶ್ರೇಯೋಭಿವೃದ್ಧಿಗೆ ಎಲ್ಲ ಸದಸ್ಯರು ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಪಾಟೀಲ್ ಯಾಳಗಿ ಸಲಹೆ ನೀಡಿದರು.
ನಗನೂರ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೋಮವಾರ ಅವಿರೋಧ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರನ್ನು ಸನ್ಮಾನಿಸಿದ ಅವರು, ಈ ಭಾಗದ ರೈತರಿಗೆ ಹೆಚ್ಚಿನ ಬಡ್ಡಿರಹಿತ ಸಾಲಸೌಲಭ್ಯ ಕಲ್ಪಿಸುತ್ತ ಗಮನಹರಿಸಬೇಕು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 12 ಬಿಜೆಪಿ ಬೆಂಬಲಿತರನ್ನು ಗೆಲ್ಲಿಸಿದ್ದು, ಹೊಣೆಗಾರಿಕೆ ಅರಿತು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು.
ಬಿಜೆಪಿ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ, ರಾಜಶೇಖರ ಗೂಗಲ್, ಬಸವರಾಜ ವಿಭೂತಿಹಳ್ಳಿ ಮಾತನಾಡಿದರು. ಪ್ರಮುಖರಾದ ಅಡಿವೆಪ್ಪ ಜಾಕಾ, ಬಸನಗೌಡ, ತಿರುಪತಿಗೌಡ, ಶಾಂತಣ್ಣ ಚೆನ್ನೂರ, ಮಲ್ಲು ಶಾಕಾ, ಸಂಗಣ್ಣ ವಣಿಕ್ಯಾಳ, ದೇವಣ್ಣ ದೇಶಪಾಂಡೆ, ಮಡೆಪ್ಪ ಮಡ್ಡಿ, ಮಾಣಿಕರೆಡ್ಡಿ ದೇಶಪಾಂಡೆ, ರಾಜು ಟಕ್ಕಳಕಿ, ಸಿದ್ದು ವಣಿಕ್ಯಾಳ, ಗುರಣ್ಣ ತಿಪಶೆಟ್ಟಿ ಇತರರಿದ್ದರು.
ಚುನಾವಣಾಧಿಕಾರಿಯಾಗಿ ಅಬ್ದುಲ್ ಬಾಷಾ ಗೋನಾಲ ಕಾರ್ಯನಿರ್ವಹಿಸಿದರು. ಪಿಕೆಪಿಎಸ್ ಇಒ ಹಳ್ಳೆರಾಯ ದೇಸಾಯಿ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಮಾಣಪತ್ರ ನೀಡಿದರು.
ನೂತನ ಪದಾಧಿಕಾರಿಗಳು: ಶರಣಮ್ಮ ಮಲ್ಲಣ್ಣ (ಅಧ್ಯಕ್ಷೆ), ನಾಗಪ್ಪಗೌಡ ಯಂಕಪ್ಪಗೌಡ (ಉಪಾಧ್ಯಕ್ಷ), ಬಸಣ್ಣ ಶರಣಪ್ಪ, ಬಸವರಾಜ ಗುರುಬಸಪ್ಪ, ಭೀಮರೆಡ್ಡಿ ಯಮನಪ್ಪ, ಶರಣಪ್ಪ ಮಲ್ಲಣ್ಣ, ಬಸನಗೌಡ ಶಂಕ್ರೆಪ್ಪ, ಶರಣಪ್ಪ ಶಂಕ್ರೆಪ್ಪ, ಹಣಮಂತ್ರಾಯ ಮಲ್ಲಪ್ಪ, ಹೊನ್ನಪ್ಪ ದೇವಿಂದ್ರಪ್ಪ, ಸಾಯಬಣ್ಣ ಈರಗವ್ವ, ಶರಣಮ್ಮ ಗುರಪ್ಪಗೌಡ (ನಿರ್ದೇಶಕರು).