ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸಂಸ್ಥೆಯಿಂದ ಅಂಕಲಿ ಗ್ರಾಮದ ಸದಸ್ಯರಿಗೆ ವಾಹನ ಕೀ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಡಾ. ಪ್ರೀತಿ ದೊಡವಾಡ, ಮಲ್ಲಿಕಾರ್ಜುನ ಕೋರೆ, ಪಿಂಟು ಹಿರೇಕುರುಬರ, ಅನಿಲ ಪಾಟೀಲ, ಅನಿಲ ಚೌಗುಲೆ, ಡಾ. ಸುಕುಮಾರ ಚೌಗುಲೆ, ಅಣ್ಣಾಸಾಹೇಬ ಸಂಕೇಶ್ವರಿ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ ಇತರರಿದ್ದರು. 
ಜಿಲ್ಲೆ

ರೈತರ ಬೆನ್ನೆಲುಬು ಸಹಕಾರಿ ರಂಗ

ಮಾಂಜರಿ: ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗದ ಮೂಲಕ ರೈತರ ಬೆನ್ನುಲುಬಾಗಿ ಕಾರ್ಯ ಮಾಡಿದರೆ ಅದು ನಿಜವಾದ ಸಹಕಾರ ಧರ್ಮ ಎಂದು ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ನಿರ್ದೇಶಕಿ ಡಾ. ಪ್ರೀತಿ ದೊಡವಾಡ ಹೇಳಿದರು.

ಸಮೀಪದ ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಮೂಲಕ ಸಂಸ್ಥೆಯ ಸದಸ್ಯ ರೈತರಿಗೆ ಈಚೆಗೆ ಕಡಿಮೆ ಬಡ್ಡಿದರದಲ್ಲಿ ವಾಹನ ವಿತರಣೆ ಮಾಡಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಡಾ. ಪ್ರಭಾಕರ ಕೋರೆ ಅವರು ಕೆಎಲ್ಇ ಶಿಕ್ಷಣ ಸಂಸ್ಥೆಯ ಮೂಲಕ ಸಾಮಾನ್ಯ ಜನರ ಆರೋಗ್ಯ ಹಾಗೂ ಶಿಕ್ಷಣ ಜತೆಗೆ ಸಹಕಾರಿ ರಂಗದಲ್ಲಿ ಮಾಡಿರುವ ಕಾರ್ಯ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕ್ರೆಡಿಟ್ ಸೌಹಾರ್ದ ಸಂಸ್ಥೆ ಅನೇಕ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಶಾಖೆ ವಿಸ್ತರಿಸುವ ಮೂಲಕ ಸಹಕಾರಿ ರಂಗ ಸದೃಢಗೊಳಿಸಿದ್ದಾರೆ ಎಂದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ, ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ನಿರ್ದೇಶಕ ಪಿಂಟು ಹಿರೇಕುರುಬರ, ಅನಿಲ ಪಾಟೀಲ, ಅನಿಲ ಚೌಗುಲೆ, ಡಾ. ಸುಕುಮಾರ ಚೌಗುಲೆ, ಅಣ್ಣಾಸಾಹೇಬ ಸಂಕೇಶ್ವರಿ, ಶೈಲಜಾ ಪಾಟೀಲ, ಪಾರ್ವತಿ ಧರನಾಯಿಕ, ಜಯಶ್ರೀ ಮೇದಾರ ಇತರರಿದ್ದರು.