ಜಿಲ್ಲೆ

ರೈತರ ಬದುಕಿಗೆ ವಿಎಸ್‌ಎಸ್‌ಎನ್ ಆಧಾರ

ಕೊರಟಗೆರೆ: ಸಾರ್ವಜನಿಕರು ತಮ್ಮ ಠೇವಣಿಗಳನ್ನು ಸಹಕಾರ ಸಂದಲ್ಲೇ ಇಟ್ಟರೆ ಅದು ರೈತರ ಬದುಕಿಗೆ ಬಲವಾಗಲಿದೆ ಎಂದು ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಎಸ್.ವಿನಯ್ ಕುವಾರ್ ತಿಳಿಸಿದರು.

ಕೊರಟಗೆರೆ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದಲ್ಲಿ ಮಂಗಳವಾರ ಆಯೋಜಿಸಿದ್ದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ರೈತರು ಮತ್ತು ಆಡಳಿತ ಮಂಡಳಿಯ ನಡುವೆ ವಿಶ್ವಾಸಾರ್ಹ ಸಂಬಂಧ ಬೆಳೆಸಿರುವುದೇ ನಮ್ಮ ಶಕ್ತಿ. ಹಿಂದಿನ ದಿನಗಳಲ್ಲಿ ಕಸಬಾ ವಿಎಸ್‌ಎಸ್‌ಎನ್ ಸಂಕಷ್ಟವನ್ನು ಎದುರಿಸಿತ್ತು. ಈಗ ಚೇತರಿಕೆ ಕಂಡು ತಾಲೂಕಿನ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಶಕ್ತಿಶಾಲಿ ಸಂವಾಗಿ ಬೆಳೆಯುತ್ತಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್. ಹನುವಾನ್ ವಾತನಾಡಿ, ತಾಲೂಕಿನ ಎಲ್ಲ ಸಹಕಾರ ಸಂಗಳಿಗೆ ಶ್ರೀದಲ್ಲೇ ಕೆಸಿಸಿ ಸಾಲ ಲಭ್ಯವಾಗುವ ಭರವಸೆ ನೀಡಲಾಗಿದೆ. ಈಗಾಗಲೇ ಕಸಬಾ ಸಂಕ್ಕೆ 4.60 ಕೋಟಿ ರೂ. ಕೆಸಿಸಿ ಸಾಲ ನೀಡಲಾಗಿದೆ. ಹಲವು ಸವಾಲುಗಳ ನಡುವೆಯೂ ಸಂ ಉತ್ತಮ ಸಾಧನೆ ವಾಡುತ್ತಿದೆ ಎಂದು ಪ್ರಶಂಸಿಸಿದರು.

ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ಗಳ ಮೇಲ್ವಿಚಾರಕ ತಿಮ್ಮರಾಜು ವಾತನಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಒ.ಕೃಷ್ಣಮೂರ್ತಿ, ಸಂದ ನೌಕರರಾದ ದಿನಕರ, ವಾರುತಿ, ಮುಖಂಡರಾದ ಪೊಲೀಸ್ ನಾಗಪ್ಪ, ನಾಗರತ್ನಮ್ಮ, ಅಂಜನಪ್ಪ, ಗಂಗಾಧರಯ್ಯ, ಸಿದ್ದಲಿಂಗಪ್ಪ, ಮೈಲಾರಪ್ಪ, ಭೀಮರಾಜು ಇದ್ದರು.