ಇಂಡಿಯ ಮಿನಿ ವಿಧಾನಸೌಧದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು. ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ, ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ಬಿ.ಎಸ್. ಪಾಟೀಲ ಇತರರಿದ್ದರು. 
ಜಿಲ್ಲೆ

ರೈತರ ಬಡವರ ಯೋಜನೆ ಕಸಿದಿದೆ

ಇಂಡಿ: ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಶುಕ್ರವಾರ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಬಿ.ಎಸ್. ಕಡಕಬಾವಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಸುಗೌಡ ಬಿರಾದಾರ ಮಾತನಾಡಿ, ಕಾಂಗ್ರೆಸ್ ಸರ್ಕಾರ ರೈತರ ಕೃಷಿಗೆ ವಿದ್ಯುತ್ ಕಡಿತ ಮಾಡುತ್ತಿದೆ. ಬಿಜೆಪಿ ಸರ್ಕಾರದ ರೈತಪರ ಯೋಜನೆಗಳನ್ನು ಹಿಂಪಡೆದಿದೆ. ರೈತಪರ, ಬಡವರ ಪರ ಯೋಜನೆ ಕಸಿದುಕೊಂಡಿದೆ. ಬರಗಾಲ ಪರಿಸ್ಥಿತಿ ನಿಭಾಸುತ್ತಿಲ್ಲ. ಈ ಮೊದಲು ರೈತರಿಗೆ ಬೆಳಗ್ಗೆ ಏಳು ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಈಗ ವಿದ್ಯುತ್ ಲೋಡ್ ಶೆಡ್ಡ್ಡಿಂಗ್ ಮಾಡುತ್ತಿದೆ. ಕೃಷಿ ಭೂಮಿಗೆ ನೀರು ಕೊಡುತ್ತಿಲ್ಲ. ಕೃಷ್ಣಾ ಯೋಜನೆಗೆ ಹಣ ನೀಡುತ್ತೇವೆ ಎಂದು ಹೇಳಿ ಈಗ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಒಬಿಸಿ ಮೋರ್ಚಾ ಸದಸ್ಯ ಶೀಲವಂತ ಉಮರಾಣಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ, ಅನೀಲ ಜಮಾದಾರ, ಬಿ.ಎಸ್. ಪಾಟೀಲ, ಸಿದ್ದರಾಯ ವಾಲಿಕಾರ, ಸೋಮು ನಿಂಬರಗಿಮಠ, ರಾಜು ಖಾಡೆ, ರವಿ ವಗ್ಗೆ ಮಾತನಾಡಿದರು. ಪ್ರತಿಭಟನೆ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಮಿನಿ ವಿಧಾನಸೌಧದಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಪ್ರತಿಭಟನೆಯಲ್ಲಿ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ರಾಜಕುಮಾರ ಸಗಾಯಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ಬಾಳು ಮುಳಜಿ, ಬುದ್ದುಗೌಡ ಪಾಟೀಲ, ಅಶೋಕಗೌಡ ಬಿರಾದಾರ, ಯಲ್ಲಪ್ಪ ಹದರಿ, ಅಶೋಕ ಅಕಲಾದಿ, ಶಾಂತು ಕಂಬಾರ, ಶ್ರೀಮಂತ ಮೊಗಲಾಯಿ, ಶ್ರೀನಿವಾಸ ಕಂದಗಲ್, ಸಂಜು ದಶವಂತ ಮತ್ತಿತರರಿದ್ದರು.