ಔರಾದ್: ಬರ ಘೋಷಿಸಬೇಕು, ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸಬೇಕು ಎಂದು ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ನಾಗಶೆಟ್ಟಿ ಗಾದಗೆ ಆಗ್ರಹಿಸಿದರು.
ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ, ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿ, ರೈತಪರ ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ, ಭೂ ಸಿರಿ, ಶ್ರಮ ಶಕ್ತಿ, ರೈತ ಸಂಪದ, ಎಪಿಎಂಸಿ ಕಾನೂನು, ಕೃಷಿ ಭೂಮಿ ಮಾರಾಟ ಕಾನೂನು, ಜಿಲ್ಲೆಗೊಂದು ಗೋಶಾಲೆ ಯೋಜನೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದು ಮಾಡಿದ್ದನ್ನು ಖಂಡಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮಂಡಲ ಪ್ರಧಾನ ಕಾರ್ಯದರ್ಶಿ ಖಂಡೋಬಾ ಕಂಗಟೆ, ಪ್ರಮುಖರಾದ ವೆಂಕಟರಾವ ಜಾಧವ್, ಶಿವಾಜಿರಾವ ಪಾಟೀಲ್, ಶಿವಾಜಿರಾವ ಕಾಳೆ, ರಮೇಶ ಬಿರಾದಾರ, ಶಂಕರರಾವ ಪಾಟೀಲ್ ನಾಗೂರ, ಸಂಜು ವಡೆಯಾರ, ದಯಾನಂದ ಹಳ್ಳಿಖೇಡೆ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಳ್ಳೆ, ಶ್ರೀಮಂತ ಪಾಟೀಲ್, ಶಿವರಾಜ ಅಲಮಾಜೆ, ಅಶೋಕ ಅಲಮಾಜೆ, ರಾಮರೆಡ್ಡಿ ಪಾಟೀಲ್, ಮಾರುತಿ ರೆಡ್ಡಿ ಪಟ್ನೆ, ಪ್ರಕಾಶ ಜಿರ್ಗೆ, ಸಂಜು ಮುರ್ಕೆ, ಸಚಿನ ಬಿರಾದಾರ, ರವಿಂದ್ರ ರೆಡ್ಡಿ, ಗೋವಿಂದ ಹಿಲಾಲಪೂರೆ, ಖಾಜಾ ಮಿಯ್ಯಾ , ಸಿದ್ರಾಮಪ್ಪಾ ನಿಡೋದೆ, ಸಂತೋಷ ಬಾರೋಳೆ, ಜಗದೀಶ ಪಾಟೀಲ್ ಇತರರಿದ್ದರು.