ನೊಣವಿನಕೆರೆ: ದೇಶದ ಸಂಸತಿ ಕೃಷಿ ಮತ್ತು ಋಷಿ ಎರಡು ಮುಖದಂತೆ. ಇತ್ತೀಚಿನ ದಿನಮಾನಗಳಲ್ಲಿ ಕೃಷಿ ಕೈಗೊಳ್ಳುವ ರೈತರಿಗೆ ಆಗುವ ತೊಂದರೆ ಜತೆಗೆ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆ ಉದ್ದೇಶದಿಂದ ಕೃಷಿಯಲ್ಲಿ ಯಂತ್ರೋಪಕರಣಗಳನ್ನು ಬಳಕೆಗೆ ತರಲಾಗಿದೆ ಎಂದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕಿರಿಯ ಶ್ರೀಗಳಾದ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ತಿಪಟೂರು ತಾಲೂಕು ನೊಣವಿನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಚ್ಚುಕಟ್ಟು ಪ್ರದೇಶದ ರೈತರ ಸಹಯೋಗದಲ್ಲಿ ಯಂತ್ರಶ್ರೀ ಭತ್ತ ನಾಟಿ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಯಾಂತ್ರೀಕರಣದ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು, ಅನ್ನತೂ ಪ್ರಾಣ ಪ್ರಾಣತೋ ಪರಾಕ್ರಮ ಎಂಬತೆ ಮನುಷ್ಯ ಪ್ರತಿ ನಿತ್ಯ ಅನ್ನಕ್ಕಾಗಿ ಕಾಯಕ ಮಾಡುತ್ತಿದದಾನೆ. ರೈತರು ಬೆಳೆಯುವ ಕ್ರಿಯೆ ಬಹಳ ಮಹತ್ವ ಪೂರ್ಣವಾದ್ದು, ಯಾರ ಸಹಾಯವಿಲ್ಲದೆ ಯಂತ್ರಗಳ ಮೂಲಕ ಆರೋಗ್ಯಕರವಾದ ಹೆಚ್ಚು ಬೆಳೆ ಬೆಳೆಯಲು ಈ ಯೋಜನೆ ಮತ್ತು ತರಬೇತಿ
ಸಹಕಾರಿಯಾಗುತ್ತದೆ ಎಂದರು.
ಯೋಜನೆಯ ಯಂತ್ರಶ್ರೀ ಕಾರ್ಯಕ್ರಮದ ಯೋಜನಾಧಿಕಾರಿ ಸುದೀರ್ ಜೈನ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ವಿಭಿನ್ನ ಕಾರ್ಯಕ್ರಮ ರೂಪಿಸಿದ್ದು, ರಾಜ್ಯದ್ಯಾಂತ ರೈತರಿಗೆ ಕೃಷಿ ವಿಭಾಗ ಶಾಖೆ ತೆರೆದು ಸಹಕಾರ ನೀಡುತ್ತಿದೆ. ಕರ್ನಾಟಕದಲ್ಲಿ ಭತ್ತ ಉಳಿಸಿ ಬೆಳೆಸಲು ಮತ್ತು ರೈತರನ್ನು ಪೋತ್ಸಾಹಿಸಲು ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸರ್ಕಾರ ಹಾಗೂ ಯೋಜನೆಯ ಸಹಯೋಗದಲ್ಲಿ ಸುಮಾರು 164 ಯಂತ್ರಧಾರೆ ಶಾಖೆ
ಪ್ರಾರಭಿಸಿ ಕೃಷಿ ಯಂತ್ರೋಪಕರಣಗಳ ಬಳಕೆಗೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 90 ತಾಲೂಕುಗಳಲ್ಲಿ ಕಾರ್ಯಕ್ರಮ ಅನುಷ್ಠಾನವಾಗಿದೆ ಎಂದರು.
ಭತ್ತದ ನಾಟಿಸಸಿ ಬೆಳೆಯಲು ಜಮೀನು ನೀಡಿ ಸಹಕರಿಸಿದ್ದ ರೈತರಾದ ಮಠದ ಪ್ರಕಾಶ್, ವೇದಾನಂದ ಅವರನ್ನು ಸನ್ಮಾನಿಸಲಾಯಿತು. ಹೆಗ್ಗಡೆಹಳ್ಳಿ ಮಠದ ಶ್ರೀ ಷಡ್ಭಾವರಹಿತೇಶ್ವರ ಸ್ವಾಮೀಜಿ, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ಸುವರ್ಣ, ಕೃಷಿ ಅಧಿಕಾರಿ ದಿವ್ಯ, ತಾಲೂಕು ಯೋಜನಾಧಿಕಾರಿ ಸುರೇಶ್ ಇದ್ದರು.