ಕಲಬುರಗಿ: ಜಿಲ್ಲೆಯ ಎ¯್ಲÁ ನೀರಾವರಿ ಯೋಜನೆಗಳಿಂದ ನೀರು ರೈತರ ಹೊಲ ತಲುಪಿಲ್ಲ. ನೀರು ಬಳಕೆದಾರರ ಸಂಘ, ಅಚ್ಚುಕಟ್ಟು ಪ್ರಾಧಿಕಾರದ ಮಧ್ಯೆ ಸಮನ್ವಯ ಕೊರತೆಯಿಂದ ಯೋಜನೆಗಳು ಕುಂಟುತ್ತಿವೆ. ಸಮಸ್ಯೆ ಸರಿಪಡಿಸಲು ಈ ಎ¯್ಲÁ ಯೋಜನೆಗಳಲ್ಲಿ ಕಾಮಗಾರಿಗಳ ಮೌಲ್ಯಮಾಪನವಾಗಬೇಕು. ಬಾಕಿ ಕಾಮಗಾರಿ ಏನೆ¯್ಲÁ ಆಗಬೇಕು ಎಂಬುದನ್ನು ಪಟ್ಟಿ ಮಾಡಿ ಯೋಜನೆವಾರು ಲೆಕ್ಕಹಾಕಿ, ಹೆಚ್ಚುವರಿ ಹಣ ಮಂಜೂರು ಮಾಡಿ, ರೈತರ ಹೊಲಗz್ದÉಗೆ ನೀರು ಹರಿಯುವಂತೆ ಮಾಡಬೇಕು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಆಗ್ರಹಿಸಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ಕಲಬುರಗಿ ಜಿಲ್ಲೆಯ ನೀರಾವರಿ ಯೋಜನೆಗಳ ಸ್ಥಿತಿಗತಿ ಕುರಿತು ಬೆಳಕು ಚೆಲ್ಲಿದ ಅವರು, ಜಿ¯್ಲÉಯಲ್ಲಿ ಹಲವಾರು ಪ್ರಮುಖ ನದಿಗಳು, ಜಲಾಶಯಗಳಿದ್ದರೂ ಇಂದಿಗೂ ರೈತರ ಜಮೀನು ಹಸಿಯಾಗಿಲ್ಲ, ನೀರು ಬಾರದೆ ರೈತರು ನಿರಾಶರಾಗಿದ್ದಾರೆ. ಭೀಮಾ ಏತನೀರಾವರಿ, ಗಂಡೋರಿ ನಾಲಾ, ಬೆಣ್ಣೆತೊರಾ, ಚಂದ್ರAಪಳ್ಳಿ, ಅಮರ್ಜಾ, ಮು¯್ಲÁಮಾರಿ ಕೆಳದಂಡೆ ಹೀಗೆ ೬ ಪ್ರಮುಖ ನೀರಾವರಿ ಯೋಜನೆಗಳಿದ್ದರೂ ಕಾಲುವೆ ಕೊನೆ ಭಾಗದ ರೈತರ ಗೋಳು ಬದಿಗಿಡಿ, ಅಣೆಕಟ್ಟೆಗೆ ಹೊಂದಿಕೊAಡಿರುವ ಜಮೀನುಗಳಿಗೂ ನೀರು ಹರಿದಿಲ್ಲ ಎಂದರು.
ಈ ಜಲಾಶಯಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ ರೈತರಿಗೆ ಪ್ರಯೋಜನವಾಗಿಲ್ಲ. ಭೀಮಾ ಲಿಫ್ಟ್ ಅಡಿ ೫೦೦ ಕೋಟಿಗೂ ಅಧಿಕ ಹಣ ಕಳೆದ ೩ ದಶಕದಲ್ಲಿ ವೆಚ್ಚವಾದರೂ ಯೋಜನೆ ಕೈಗೂಡಿಲ್ಲ. ಕೆಳದಂಡೆ ಮು¯್ಲÁಮಾರಿ ಯೋಜನೆಯಲ್ಲಿ ಸುಧಾರಣೆಗೆ ಬಿಡುಗಡೆಯಾಗಿರುವ ೧೨೫ ಕೋಟಿ ರೂ. ವೆಚ್ಚ ಸರಿಯಾಗಿಲ್ಲವೆಂಬ ಆರೋಪಗಳಿದ್ದವು. ಈಗ ಯೋಜನೆ ಪೂರ್ಣಗೊಂಡಿಲ್ಲ, ಇತ್ತ ಕಳಪೆ ಕಾಮಗಾರಿ, ಅತ್ತ ರೈತರಿಗೆ ನೀರಿಲ್ಲ. ತೆರಿಗೆ ಹಣ ವ್ಯರ್ಥ ಎಂದರು.
ಬೆಣ್ಣೆತೊರಾ ಬಹುದೊಡ್ಡ ಯೋಜನೆ. ೮೦ ಕಿಮೀ ಕಾಲುವೆ ನಿರ್ಮಿಸಿದರೂ ಕಾಲುವೆಯ ಅಲೈನ್ಮೆಂಟ್ ಸರಿಯಗಾಗಿಲ್ಲದ ಕಾರಣ ನೀರು ಅಣೆಕಟ್ಟೆ ಬಿಟ್ಟು ಹೊರಬರುತ್ತಿಲ್ಲ. ರೈತರು ನೀರಿಗಾಗಿ ಬಕಪಕ್ಷಿಯಂತೆ ಕಾಯುತ್ತಿದ್ದರೂ ಅಲ್ಲಿ ಸಮಸ್ಯೆ ಸರಿಪಡಿಸುವ ಕೆಲಸವಾಗುತ್ತಿಲ್ಲ. ಅಫಜಲಪುರ ತಾಲೂಕಿನ ಭೀಮಾ ಲಿಫ್ಟ್ನಲ್ಲಿಯೂ ಇದೇ ಗೋಳು. ಸಾಕಷ್ಟು ಹಣ ವೆಚ್ಚವಾದರೂ ಅಸಲಿಗೆ ನೀರೇ ಕಾಲುವೆಗೆ ಬರುತ್ತಿಲ್ಲ. ಕಾಲುವೆಗಳು ಹಾಳಾಗಿ ಹೋಗಿವೆ. ಹುಲ್ಲು ಬೆಳೆದಿದ್ದರೂ ಸರಿಪಡಿಸುವ ಕೆಲಸವಾಗಿಲ್ಲ ಎಂದು ದೂರಿದರು.
ಚಿಂಚೋಳಿಯ ಮು¯್ಲÁಮಾರಿಯಲ್ಲೂ ಗೋಳು ತಪ್ಪಿಲ್ಲ. ೧೦ ಸಾವಿರ ಹೆಕ್ಟರ್‌ಗೆ ನೀರು ಹರಿಸುವ ಯೋಜನೆಯಲ್ಲೂ ಕಳಪೆತನz್ದÉÃ ಕಾರುಬಾರು. ಕೋಟಿಗಟ್ಟಲೆ ಹಣ ವೆಚ್ಚವಾದರೂ ನಿರೀಕ್ಷೆಯಂತೆ ಕೆಲಸವಾಗಿಲ್ಲ. ಹೀಗಾಗಿ ರೈತರ ಗೋಳು ತಪ್ಪಿಲ್ಲ. ಚಂದAಪ್ರಳ್ಳಿ ಯೋಜನೆಯಲ್ಲೂ ಗೋಳಾಟ ಸಾಕಷ್ಟಿದೆ. ಆಳಂದದ ಅಮರ್ಜಾ ಯೋಜನೆಯಲ್ಲಿಯೂ ಇದೇ ಗೋಳು.ಕಾಡಾ, ನೀರಾವರಿ, ಕೃಷಿ ಹಾಗೂ ಕಂದಾಯ ಇಲಾಖೆಗಳ ನಡುವಿನ ಸಮನ್ವಯ ತಪ್ಪಿರುವುದು ಈ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದರು.