ಜಿಲ್ಲೆ

ರೈತರ ಕೈ ಹಿಡಿದ ನೇರ ಮಾರುಕಟ್ಟೆ

ಬಾಬುರಾವ ಯಡ್ರಾಮಿ ಕಲಬುರಗಿ: ಲಾಕ್ಡೌನ್ನಿಂದಾಗಿ ದ್ರಾಕ್ಷಿ, ಕಲ್ಲಂಗಡಿ ಮೊದಲಾದ ಹಣ್ಣುಗಳನ್ನು ಬೆಳೆದು ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರ ಮಾರುಕಟ್ಟೆ ಕಲ್ಪಿಸುವ ವಿನೂತನ ಪ್ರಯೋಗವೊಂದು ಕಲಬುರಗಿಯಲ್ಲಿ ಯಶಸ್ವಿಯಾಗಿದೆ. ಇದು ರೈತರ ಮತ್ತು ಗ್ರಾಹಕರ ಹಿತರಕ್ಷಣೆಗೆ ನಾಂದಿಯಾಗಿದ್ದು, ಕಡಿಮೆ ಬೆಲೆಯಲ್ಲೇ ಜನರ ಕೈಗೆ ಹಣ್ಣು ಸಿಗುವ ಮೂಲಕ ಇಬ್ಬರ ಬಾಯಿ ಸಿಹಿ ಮಾಡುತ್ತಿದೆ.
ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಹಾಗೂ ಕರೊನಾ ವಾರಿಯರ್ಸ್ ಸೇರಿ ಗೋದುತಾಯಿ ನಗರದಲ್ಲಿರುವ ಅಪ್ಪನವರ ತೋಟದಲ್ಲಿ ನೇರ ಮಾರುಕಟ್ಟೆ ಆರಂಭಿಸುವ ಮೂಲಕ ಸಂಕಷ್ಟದಲ್ಲಿರುವ ರೈತರ ಕೈ ಹಿಡಿದಿದ್ದಾರೆ. ಈ ಕಾಯಕಕ್ಕೆ ತೋಟಗಾರಿಕೆ ಇಲಾಖೆ ಮತ್ತು ಹಾಪ್ಕಾಮ್ಸ್ ಸಹಕಾರ ನೀಡಿವೆ. ಸುಮಾರು 15 ಜನರ ತಂಡ ಫಲಾಪೇಕ್ಷೆ ಇಲ್ಲದೆ ರೈತರ ಸೇವೆಯಲ್ಲಿ ತೊಡಗಿದೆ.
ಕರೊನಾ ಹಾವಳಿಯಿಂದಾಗಿ ಲಾಕ್ಡೌನ್ ಜಾರಿಯಲ್ಲಿ ಇದ್ದುದ್ದರಿಂದ ಮಾರುಕಟ್ಟೆ ಬಂದ್ ಆಗಿ ಕಲ್ಲಂಗಡಿ, ದ್ರಾಕ್ಷಿ, ಮೋಸಂಬಿ ಮೊದಲಾದವುಗಳಿಗೆ ಕೇಳುವವರಿಲ್ಲದೆ ಹಾಳಾಗಿದ್ದಲ್ಲದೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಹೇಗಾದರೂ ಮಾಡಿ ಅನ್ನದಾತರಿಗೆ ನಷ್ಟವಾಗದಂತೆ ನೋಡಿಕೊಳ್ಳಲು ಫಟಾಫಟ್ ಆಗಿ ಈ ನೇರ ಮಾರುಕಟ್ಟೆ ಆರಂಭಿಸಲಾಗಿದೆ. ವಾರದಲ್ಲೇ ರೈತರು ತಂದು ಕೊಟ್ಟ ದ್ರಾಕ್ಷಿ, ಕಲ್ಲಂಗಡಿ, ಬಾಳೆಹಣ್ಣು ಮಾರಲಾಗಿದೆ. ಪ್ರತಿದಿನ 2 ಟನ್ ದ್ರಾಕ್ಷಿ, 2 ಟನ್ ಮೋಸಂಬಿ ಸೇರಿ ಬಾಳೆಹಣ್ಣು, ಸ್ವೀಟ್ ಕಾನರ್್ ಭರ್ಜರಿಯಾಗಿ ಮಾರಾಟವಾಗುತ್ತಿವೆ. ಜನರು ಸಹ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದಿಂದ ಖುಷಿಯಿಂದಲೇ ಖರೀದಿಸುತ್ತಿದ್ದಾರೆ.


ಒಬ್ಬೊಬ್ಬರು ಒಂದು ಹೊಣೆ ಹೊತ್ತ ವಾರಿಯರ್ಸ್
ವಾತರ್ಾ ಇಲಾಖೆ ರಚಿಸಿದ ಕರೊನಾ ವಾರಿಯರ್ಸ್ ತಂಡದ ಸಹಕಾರದೊಂದಿಗೆ ರೈತರಿಂದ ಹಣ್ಣು ಖರೀದಿಸುವುದು, ಇನ್ನೊಬ್ಬರು ಅವುಗಳನ್ನು ಸ್ವಚ್ಛಗೊಳಿಸಿ ಪ್ಯಾಕಿಂಗ್ ಮಾಡುವುದು, ಇನ್ನೊಂದು ತಂಡದವರು ಮಾರಾಟ ಮಾಡುವುದು ಹೀಗೆ ಒಂದೊಂದು ಹೊಣೆ ಹೊತ್ತು ಮಾದರಿಯಾಗಿ ಕೆಲಸ ಮಾಡುತ್ತಿದ್ದಾರೆ. ತೋಟಗಾರಿಕೆ ಇಲಾಖೆ, ಹಾಪ್ಕಾಮ್ಸ್ ಮತ್ತು ರೈತರು ಸೇರಿ ದರ ನಿಗದಿಪಡಿಸಿದ ಬಳಿಕ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದಾಗಿ ಮಧ್ಯವತರ್ಿಗಳ ಹಾವಳಿ ಇಲ್ಲವೇ ಇಲ್ಲ. ಇದರಿಂದಾಗಿ ಗ್ರಾಹಕರಿಗೆ 50 ರೂ.ಗೆ ಕೆಜಿ ದ್ರಾಕ್ಷಿ, 30 ರೂ.ಗೆ ಡಜನ್ ಬಾಳೆ, 40 ಕೆಜಿ ಮೋಸಂಬಿ ಮಾರಲಾಗುತ್ತಿದೆ. ಹಣವನ್ನು ಅಂದೇ ಸಂಜೆ ರೈತರ ಖಾತೆಗೆ ಜಮೆ ಮಾಡುವ ಕೆಲಸವೂ ನಡೆದಿದೆ. ಇದರಿಂದಾಗಿ ಸಂಕಷ್ಟದಲ್ಲಿರುವ ರೈತರು ತಮ್ಮ ಅಪೇಕ್ಷೆಯಂತೆ ಬೆಲೆ ಸಿಗುತ್ತಿರುವುದಕ್ಕೆ ಖುಷಿಯಲ್ಲಿದ್ದಾರೆ ಎಂದು ಲಿಂಗರಾಜಪ್ಪ ಅಪ್ಪ ಹೇಳುವಾಗ ಮೊಗದಲ್ಲಿ ಸಾರ್ಥಕತೆ ಭಾವ ಕಾಣುತ್ತಿತ್ತು. ವಾರಿಯರ್ಸ್ ತಂಡದ ರಾಘವೇಂದ್ರ ಪ್ರಸಾದ, ವಿವೇಕಾನಂದರಾವ, ದೀಪಕ ದೇಶಪಾಂಡೆ, ಮಹಾದೇವ ಬಿರಾದಾರ, ಕೌಶಿಕ್ ಗುತ್ತೇದಾರ್, ರಾಘವೇಂದ್ರ ಸಜ್ಜನ, ವಿಜಯಕುಮಾರ ಕೈರಾಟ್, ಮಂಜುನಾಥ ಮಾನಕೋಜಿ, ಚನ್ನಬಸಪ್ಪ ಕೇಶ್ವಾರ, ಪ್ರಕಾಶ ಕುಲಕಣರ್ಿ, ಮಹಾಂತೇಶ, ಮಹೇಶ ದೇಶಪಾಂಡೆ ಇತರರು ಮಣ್ಣಿನ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.


ವಾಹನಗಳ ಜತೆಗೆ ಸ್ಥಳ ನೀಡಿದ ಲಿಂಗರಾಜಪ್ಪ ಅಪ್ಪ
ಗೋದುತಾಯಿ ನಗರದ ಅಪ್ಪನವರ ತೋಟದಲ್ಲಿರುವ 3500 ಚದರಡಿ ಕಟ್ಟಡ ಹಾಗೂ 5000 ಚದರಡಿ ಬಯಲು ಜಾಗವನ್ನು ರೈತರ ಅನುಕೂಲಕ್ಕಾಗಿ ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜಪ್ಪ ಅಪ್ಪ ಉಚಿತವಾಗಿ ಕಲ್ಪಿಸಿಕೊಟ್ಟಿದ್ದಾರೆ. ಈ ಕಾಯಕಕ್ಕೆ ತೋಟಗಾರಿಕೆ ಇಲಾಖೆ ಮತ್ತು ಹಾಪ್ಕಾಮ್ಸ್ ಕೈಜೋಡಿಸಿವೆ. ರೈತರು ಬೆಳೆದ ಹಣ್ಣುಗಳನ್ನು ತರಲು ಲಿಂಗರಾಜಪ್ಪ ಅಪ್ಪ ಮೂರು ಮಿನಿ ಗೂಡ್ಸ್ ವಾಹನ ನೀಡಿದ್ದಾರೆ. ಕಲಬುರಗಿ ಸುತ್ತಲಿನ ಹಳ್ಳಿಗಳಿಂದ ಹೋಗಿ ಹಣ್ಣು ತರಲಾಗುತ್ತದೆ. ಅಲ್ಲದೆ ಲಿಂಗರಾಜಪ್ಪ ಅವರ ಉದ್ಯಮದ ಭಾಗವಾಗಿ ಬೇರೆಡೆ ಹೋಗುವ ವಾಹನಗಳಲ್ಲೂ ಹಣ್ಣು ತುಂಬಿಕೊಂಡು ತರಲಾಗುತ್ತಿದೆ. ಹೀಗೆ ರೈತರ ನೆರವಿಗೆ ಬರುವ ಕೆಲಸ ಸದ್ದಿಲ್ಲದೆ ನಡೆದಿದೆ. ರೈತರು ತಮ್ಮ ತೋಟದಲ್ಲಿ ಬೆಳೆದ ಹಣ್ಣು-ತರಕಾರಿ ಮಾರಲು ಮೊ.98865 33378ಗೆ ಸಂಪಕರ್ಿಸಬಹುದು. ಈಗ ಹಣ್ಣುಗಳು ಸಿಗುತ್ತಿದ್ದು, ನಾಳೆಯಿಂದ ತರಕಾರಿಯೂ ಸಿಗಲಿದೆ.


ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರಬೇಕು ಎಂದುಕೊಂಡು ತಕ್ಷಣಕ್ಕೆ ಈ ನೇರ ಮಾರುಕಟ್ಟೆ ಆರಂಭಿಸಿದ್ದೇವೆ. ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪುವುದರಿಂದ ದರವೂ ಕಡಿಮೆ ಇರಲಿದೆ. ಎಲ್ಲರೂ ಸಾಥ್ ನೀಡಿದ್ದರಿಂದ ನಡೆಸಿಕೊಂಡು ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇದಕ್ಕೊಂದು ಹೊಸ ರೂಪ ನೀಡಲು ಯೋಜಿಸುತ್ತಿದ್ದೇವೆ.
| ಲಿಂಗರಾಜಪ್ಪ ಅಪ್ಪ
ರೈತರ ಉತ್ಪನ್ನಗಳ ನೇರ ಮಾರುಕಟ್ಟೆ ರೂವಾರಿ