ಜಿಲ್ಲೆ

ರೈತರ ಆದಾಯ ದ್ವಿಗುಣಕ್ಕೆ ಮೋದಿ ಗಟ್ಟಿ ನಿರ್ಧಾರ: ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿಕೆ

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸಲು ಅನೇಕ ಯೋಜನೆ ಜಾರಿಗೆ ತಂದಿವೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.

ತುಮಕೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಈ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ ಎಂದರು.

ದೇಶದಲ್ಲಿ ಒಟ್ಟು ಜನಸಂಖ್ಯೆಯ ಶೇ.48 ಜನ ಕೃಷಿ ಮತು ್ತ ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ಕೋಟಿಗೂ ಅಧಿಕ ಕೃಷಿ ಕುಟುಂಬಗಳಿವೆ. ದೇಶ ಆತ್ಮನಿರ್ಭರವಾಗಬೇಕಾದರೆ ಕೃಷಿ ೇತ್ರ ಆತ್ಮನಿರ್ಭರವಾಗುವುದು ಅತ್ಯಂತ ಅಗತ್ಯವಾಗಿದೆ. ಕೃಷಿ ೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರ ತಲಾ ಆದಾಯವನ್ನು ಹೆಚ್ಚು ಮಾಡಬೇಕಾಗಿರುವುದು ಅವಶ್ಯವಾಗಿದೆ ಎಂದರು.

ರೈತರ ಆದಾಯ 2011&12ರಲ್ಲಿ 77102 ರೂ.ಕಡಿಮೆ ಇತ್ತು. ಈಗ 122616 ರೂ.ಗೆ (2019&20) ಏರಿದೆ. ದೇಶದ ಜಿಡಿಪಿಯಲ್ಲಿ 2014ಕ್ಕಿಂತ ಮುಂಚೆ ರೈತರ ಪಾಲು ಶೇ.11 ಇತ್ತು, ಈಗ ಶೇ.20ಕ್ಕೆ ಏರಿದೆ. ಸ್ವತಂತ್ರ ನಂತರದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ಗಟ್ಟಿ ನಿರ್ಧಾರವನ್ನು ಕೈಗೊಂಡ ಮೊದಲ ಪ್ರಧಾನಮಂತ್ರಿ ನರೇಂದ್ರ ಮೋದಿ ಎಂದರೆ ತಪ್ಪಾಗಲಾರದು ಎಂದರು.

ರಸಗೊಬ್ಬರಕ್ಕೆ ಹಾಲಿ ಇರುವ 1.05 ಲಕ್ಷ ಕೋಟಿ ಸಬ್ಸಿಡಿಯ ಮೇಲೆ ಹೆಚ್ಚುವರಿಯಾಗಿ 1.10ಲಕ್ಷ ಕೋಟಿ ರೂ. ಸಬ್ಸಿಡಿ ೂಷಿಸುವ ಮೂಲಕ ದೇಶದ ರೈತಾಪಿ ವರ್ಗದ ಹಿತ ಕಾಯುವಲ್ಲಿ ಮೋದಿ ಸರ್ಕಾರ ಸಫಲವಾಗಿದ್ದು, ಅನ್ನದಾತನ ಬೆನ್ನಿಗೆ ಸರ್ಕಾರ ಸದಾ ಇದೆ ಎನ್ನುವ ಸಂದೇಶ ರವಾನಿಸಿದ್ದಾರೆ ಎಂದರು.

ದೇಶದ ರೈತರಿಗೆ ಅಗತ್ಯ ಪ್ರಮಾಣದಲ್ಲಿ ಕಡಿಮೆ ವೆಚ್ಚದಲ್ಲಿ ಯೂರಿಯಾ ಪೂರೈಕೆ ಖಚಿತಪಡಿಸುವ ನಿಟ್ಟಿನಲ್ಲಿ ಇನ್ನೂ 8 ನ್ಯಾನೋ ಯೂರಿಯಾ ಟಕ ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ೂಷಣೆ ಮಾಡಿದ್ದು, 175 ಕೋಟಿ ರೂಪಾಯಿ ವೆಚ್ಚದಲ್ಲಿ ಗುಜರಾತ್​ನ ಕಲೋಲ್​ ನಗರದ ಇಪೋ ಟಕದಲ್ಲಿ ನಿರ್ಮಾಣವಾಗಲಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಜಿ.ಬಿ.ಜ್ಯೋತಿಗಣೇಶ್​, ಬಿಜೆಪಿ ಜಿಲ್ಲಾಧ್ಯಕ್ಷ ಎಚ್​.ಎಸ್​.ರವಿಶಂಕರ್​ ಹೆಬ್ಬಾಕ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​, ಎಸ್​.ಗುರುಲಿಂಗನಗೌಡ, ಪಾಲಿಕೆ ಮೇಯರ್​ ಬಿ.ಜಿ.ಕೃಷ್ಣಪ್ಪ, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಜಿಲ್ಲಾಧ್ಯಕ್ಷ ಆರ್​.ಎಸ್​.ಶಿವಶಂಕರಬಾಬು, ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್​ ನಂದೀಶ್​, ನಗರಾಧ್ಯಕ್ಷ ಜಗದೀಶ್​, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್​ ಇದ್ದರು.

ಕೃಷಿ ೇತ್ರ ಕುದುರೆ ಜೂಜು ಇದ್ದಂತೆ. ಮಳೆ ಹೆಚ್ಚಾದರೂ ಕಷ್ಟ, ಕಡಿಮೆಯಾದರೂ ಕಷ್ಟ. ಹೀಗಾಗಿ ರೈತನೊಂದಿಗೆ ಮಳೆ ಜೂಜಾಟವಾಡುತ್ತಿದ್ದು, ರೈತರ ಆದಾಯ ರಹಿತವನ್ನು ಆದಾಯವನ್ನಾಗಿ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಯೋಜನೆ ರೂಪಿಸಿ ಅದಕ್ಕೆ ನಾಂದಿ ಹಾಡುವ ಕೆಲಸ ಮಾಡಿದ್ದಾರೆ. > ಜಿ.ಎಸ್​.ಬಸವರಾಜು, ಸಂಸದ ಕಾಂಗ್ರೆಸ್​ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್​ ಬೇಲ್​ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್​ ಕಳ್ಳರ ಸಂವಿದ್ದಂತೆ. ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದ ವೇಳೆ ಸುಮಾರು 4 ಲಕ್ಷ ಕೋಟಿ ರೂ. ಹಗರಣ ನಡೆದಿದೆ. > ಬಿಜೆಪಿ, ರಾಜ್ಯಾಧ್ಯಕ್ಷ

ಲೂಟಿ ಮಾಡಿ ದೇಶವನ್ನೇ ಮಾರಿದ ಕಾಂಗ್ರೆಸ್​

ತುಮಕೂರು: ಸುದೀರ್ ಕಾಲ ದೇಶವನ್ನಾಳಿದ ಕಾಂಗ್ರೆಸ್​ ತನ್ನ ಆಡಳಿತದಲ್ಲಿ ಲೂಟಿ ಮಾಡಿ ದೇಶವನ್ನೇ ಮಾರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಾಗ್ದಾಳಿ ನಡೆಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ನಾನು ರಾಜ್ಯಾಧ್ಯಕ್ಷನಾಗಿ ಮೂರು ವರ್ಷ ಕಳೆದಿದೆ, ರೈತಮೋರ್ಚಾ ಕೂಡ ಎರಡು ವರ್ಷ ಕಳೆದಿದೆ. ಈ ಹತ್ತಾರು ವರ್ಷಗಳ ಅವಧಿಯಲ್ಲಿ ಅಭೂತಪೂರ್ವ ಸಾಧನೆಯನ್ನು ಬಿಜೆಪಿ ಮಾಡಿದೆ ಎಂದರು.

ಕುವೆಂಪು ರೈತರ ಬಗ್ಗೆ ವಿಶಿಷ್ಟ ವಿಭಿನ್ನವಾಗಿ ಹೇಳಿದ್ದಾರೆ, ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಬಿ.ಎಸ್​.ಯಡಿಯೂರಪ್ಪ ಸರ್ಕಾರ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ, ಯಡಿಯೂರಪ್ಪ ಅವರನ್ನು ರೈತರ ಮಗ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.

ರೈತರ ಶಾಪ ಕಾಂಗ್ರೆಸ್​ಗೆ ತಟ್ಟಿದೆ, ಅನೇಕ ನಾಯಕರು ಕಾಂಗ್ರೆಸ್​ ತೊರೆದಿದ್ದಾರೆ, ಸಿದ್ದರಾಮಯ್ಯ ಅವಧಿಯಲ್ಲಿ ಅತಿ ಹೆಚ್ಚು ಗೋಹತ್ಯೆ ನಡೆದಿದೆ, ಟಿಪ್ಪು ಜಯಂತಿ ಬಗ್ಗೆ ಯೋಚನೆ ಮಾಡಿ, ಸಮಾಜವನ್ನು ಒಡೆದರು. ರೈತರ ಬದುಕು ಹಸನು ಮಾಡುವ ಬಗ್ಗೆ ಯೋಚನೆ ಮಾಡಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ ನೀವು ಡೋಂಗಿ ರಾಜಕಾರಣಿ, ನಿಮ್ಮಿಂದ ಕಾಂಗ್ರೆಸ್​ಮುಕ್ತ ಕರ್ನಾಟಕ ಆಗುತ್ತಿದೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈಗ ಡಿ.ಕೆ.ಶಿವಕುಮಾರ್​ ಅವರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದೀರಿ, ಈಗಾಗಲೆ ಮತ್ತೆ ಸಿಎಂ ಆಗಲು ಟವೆಲ್​ ಹಾಕಿದ್ದೀರಿ. ಸಿದ್ದರಾಮಯ್ಯ ನೀವೆಂದೂ ಮತ್ತೆ ಸಿಎಂ ಆಗಲ್ಲ. ನಿಮ್ಮ ಹೆಸರು ರಾಮನದ್ದು, ಆದರೆ ನಿಮ್ಮ ಮುಖ, ಮನಸ್ಸು ಚಿಂತನೆಗಳೆಲ್ಲವೂ ರಾವಣನದ್ದು ಎಂದು ಲೇವಡಿ ಮಾಡಿದರು.