ಅಥಣಿ ಗ್ರಾಮೀಣ, ಬೆಳಗಾವಿ: ರೈತರ ಅಭಿವೃದ್ಧಿಗಾಗಿ ಪಿಕೆಪಿಎಸ್‌ನಿಂದ ಅವಶ್ಯವಿರುವ ಎಲ್ಲ ಸವಲತ್ತು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಬಸಪ್ಪ ಗುಮಟಿ ಹೇಳಿದರು.ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಟ್ಟು 497 ಸದಸ್ಯರಿದ್ದು, 4.56 ಕೋಟಿ ರೂ. ಸಾಲ ನೀಡಲಾಗಿದೆ. 22.46 ಲಕ್ಷ ರೂ.ನಿವ್ವಳ ಲಾಭ ಗಳಿಸಿದ್ದು, ಕಡಿಮೆ ದರದಲ್ಲಿ ಗೊಬ್ಬರ ವಿತರಿಸಲಾಗುತ್ತಿದೆ. ರೈತರು ಸದುಪಯೋಗ ಪಡೆಯಬೇಕು. ಬರುವ ದಿನಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ವಾಹನ ಸಾಲ ನೀಡಲಾಗುವುದು ಎಂದು ಹೇಳಿದರು. ಮುಖ್ಯ ಕಾರ್ಯನಿರ್ವಾಹಕ ತಾತ್ಯಾಸಾಬ ಪಾಟೀಲ ವಾರ್ಷಿಕ ವರದಿ ಓದಿದರು. ಉಪಾಧ್ಯಕ್ಷ ನಾನಾಸಾಬ ಗಿರಿಗೌಡ, ನಿರ್ದೇಶಕರಾದ ರಾವಸಾಬ ಪಾಟೀಲ, ಮಹಾವೀರ ಸಕಲಕನವರ್, ಲಕ್ಕಪ್ಪ ಟೋಳಿ, ಆದೇಶ್ವರ ಸಕಲಕನವರ, ಮುಖಂಡ ಪುಷ್ಪಕ ಪಾಟೀಲ, ಗೋಪು ಸಪ್ತಸಾಗರ, ಸುರೇಶ ಗಿರಿಗೌಡ, ಪ್ರಲ್ಹಾದ ಇನಾಮದಾರ, ಸುಕುಮಾರ ಪಾಟೀಲ, ಸಿದ್ಧಪ್ಪ ಬಿರಾದಾರಪಾಟೀಲ ಇತರರಿದ್ದರು.