ಮುದಗಲ್: ಹೆಗ್ಗಾಪುರ ತಾಂಡಾದಲ್ಲಿ ಕಾಡುಹಂದಿ ದಾಳಿಯಿಂದ ರೈತ ಹನುಮಂತ ನರಸಿಂಗಪ್ಪ ನಾಯಕ್ ಗುರುವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹನುಮಂತ ಹೊಲಕ್ಕೆ ಹೋಗುವಾಗ ಹಿಂದಿನಿಂದ ಕಾಡು ಹಂದಿ ದಾಳಿ ನಡೆಸಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿರುವ ಹನುಮಂತ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.