ಜಿಲ್ಲೆ

ರೈತನ ಜಮೀನಿಗೆ ಕೃಷಿ ಅಧಿಕಾರಿಗಳ ಭೇಟಿ

ಧಾರವಾಡ: ಬಿತ್ತನೆ ಮಾಡಿದ ಸೋಯಾಬೀನ್ ಮೊಳಕೆಯೊಡೆಯದ ಹಿನ್ನೆಲೆಯಲ್ಲಿ ತಾಲೂಕಿನ ಲಕಮಾಪುರ ಗ್ರಾಮದ ರೈತನ ಜಮೀನಿಗೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಇಲಾಖೆಯ ಸಹಾಯಕ ನಿರ್ದೇಶಕ ಸಿ.ಜಿ. ಮೈತ್ರಿ ಹಾಗೂ ಎಒ ಸೋಮಲಿಂಗಪ್ಪ ಅಂತರತಾನಿ ಭೇಟಿ ನೀಡಿ, ರೈತ ಬಸವರಾಜ ಗಬ್ಬೂರ ಅವರಿಂದ ಮಾಹಿತಿ ಪಡೆದರು.

ಮೇಲ್ನೋಟಕ್ಕೆ ಆಳವಾದ ಬಿತ್ತನೆ ಮಾಡಿರುವುದು ಕಂಡುಬಂದಿದ್ದು, ಶೀಘ್ರವೇ ಕೃಷಿ ವಿಜ್ಞಾನಿ ಹಾಗೂ ತಂಡದೊಂದಿಗೆ ಭೇಟಿ ನೀಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.