ಜಿಲ್ಲೆ

ರೈತನ ಕಣ್ಣೀರು ತರಿಸಿದ ಮೆಣಸಿನಕಾಯಿ

ಚನ್ನಬಸಯ್ಯ ಗುರುವಿನ

ಕೊಡೇಕಲ್ : ವಲಯದಲ್ಲಿ ಗುರುವಾರ ಸಂಜೆ ಏಕಾಏಕಿ ಬೀಸಿದ ಬಿರುಗಾಳಿಯ ಹೊಡೆತಕ್ಕೆ ಭರಪೂರಾಗಿ ಬೆಳೆದ ಮೆಣಸಿನಕಾಯಿ ಗಿಡಗಳು ನೆಲಕಚ್ಚಿದ್ದರಿಂದ ರೈತರಿಗೆ ಬರಸಿಡಲು ಬಡಿದಂತಾಗಿದೆ.

ಸAಜೆ ಏಕಾಏಕಿಯಾಗಿ ಸಾಧಾರಣ ಮಳೆಯೊಂದಿಗೆ ಬೀಸಿದ ಬಿರುಗಾಳಿ ಹೊಡೆತಕ್ಕೆ ಸಮೀಪದ ಮಾರನಾಳ ಗ್ರಾಮದಲ್ಲಿ ಅಂದಾಜು ೧೫ ಎಕರೆಯಲ್ಲಿ ಬೆಳೆಯಲಾದ ಮೆಣಿಸಿನ ಗಿಡಗಳು ನೆಲಕ್ಕುರುಳಿದ್ದು, ಇದರಿಂದ ರೈತರು ಭಾರಿ ನಷ್ಟ ಅನುಭವಿಸುವಂತಾಗಿದೆ.

ಮೂರು ತಿಂಗಳ ಹಿಂದೆ ದುಬಾರಿ ಬೆಲೆಯ ಮೆಣಸಿನ ಬೀಜ ಖರೀದಿಸಿ ಬಿತ್ತನೆ ಮಾಡುವ ಮೂಲಕ ಸಮಯಕ್ಕೆ ಸರಿಯಾಗಿ ಬೆಳೆಗಳಿಗೆ ಗೊಬ್ಬರ, ಕ್ರಿಮಿನಾಶ ಸಿಂಪಡಣೆ ಮಾಡಿ ಆರೈಕೆ ಮಾಡಲಾಗಿತ್ತು. ಬೆಳೆ ಕೂಡ ಚನ್ನಾಗಿ ಬಂದಿದ್ದು, ರೈತರು ಹೆಚ್ಚಿನ ಇಳುವರಿ ಪಡೆಯುವ ನಿರೀಕ್ಷಕೆಯಲ್ಲಿದ್ದ ಮೆಣಸಿನಕಾಯಿ ಬೆಳೆಗಾರರಿಗೆ ಗುರುವಾರ ಸಂಜೆ ಬೀಸಿದ ಗಾಳಿ ರೈತರ ಬದುಕಿನಲ್ಲಿ ಕೂಡಾ ಬಿರುಗಾಳಿ ಎಬ್ಬಿಸಿದಂತಾಗಿದೆ.

ಈಗಾಗಲೇ ನಾಲ್ಕು ತಿಂಗಳ ಮೆಣಸಿನಕಾಯಿ ಬೆಳೆ ಸಮೃದ್ಧವಾಗಿ ಕಾಯಿ ಬಿಡುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿತ್ತು. ಗಿಡಗಳು ಸಹ ತುಂಬಾ ಭರಪೂರ ಕಾಯಿ ಕಟ್ಟಿದ್ದವು. ಆದರೆ ಬಿರುಗಾಳಿಯ ಸಂಪೂರ್ಣ ನೆಲಕ್ಕುರುಳಿದ್ದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.

ಇAತಹ ಬರ ಪರಿಸ್ಥಿತಿಯಲ್ಲೂ ರೈತರು ಲಕ್ಷಾಂತರ ರೂ. ಸಾಲ-ಸೂಲ ಮಾಡಿ ಸಮೃದ್ಧವಾಗಿ ಮೆಣಸಿನಕಾಯಿ ಬೆಳೆ ಬೆಳೆದಿದ್ದರು. ಇನ್ನೊಂದು ತಿಂಗಳಲ್ಲಿ ಕಾಯಿಗಳು ಹಣ್ಣು ಆಗುತ್ತಿದ್ದವು. ಇವುಗಳನ್ನು ಬೇರ್ಪಡಿಸಿ ಮಾರುಕಟ್ಟೆಗೆ ಕಳುಹಿಸಬೇಕೆನ್ನುವಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಗುರುವಾರ ಬೀಸಿದ ಗಾಳಿಯಿಂದ ಮೆಣಸಿನಕಾಯಿ ಭೂಮಿಗೆ ಬಿದ್ದು ಕೊಳೆತು ಹೋಗುತ್ತವೆ. ಇದರಿಂದ ನಮ್ಮ ಹಣೆ ಬರಹನೆ ಚನ್ನಾಗಿ ಇಲ್ಲ ಅಂತ ಕಾಣಿಸುತ್ತೆ ಎಂದು ರೈತ ಈರಪ್ಪ ಗುಂಡಕನಾಳ ಮತ್ತು ಸಾಯಿಬಣ್ಣ ತೋಟದ ತಮ್ಮ ನೋವು ತೋಡಿಕೊಂಡರು. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆದ ಮೆಣಸಿನಕಾಯಿ ಸಂಪೂರ್ಣ ಹಾಳಾಗಿದ್ದು, ಕೂಡಲೇ ಈ ರೈತರಿಗೆ ಪರಿಹಾರ ನೀಡಬೇಕು ಎಂದು ವಲಯದ ರೈತರು ಒತ್ತಾಯಿಸಿದ್ದಾರೆ.