filter: 0; fileterIntensity: 0.0; filterMask: 0; captureOrientation: 0; algolist: 0; multi-frame: 1; brp_mask:0; brp_del_th:null; brp_del_sen:null; motionR: 0; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 131.40643;aec_lux_index: 0;albedo: ;confidence: ;motionLevel: 0;weatherinfo: null;temperature: 30; 
ಜಿಲ್ಲೆ

ರೈತ ಹಿತ ರಕ್ಷಣಾ ಪೆನಲ್‌ಗೆ ಜಯ

ಕಾಗವಾಡ: ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ಜರುಗಿದ ಚುನಾವಣೆಯಲ್ಲಿ ಮುಖಂಡರಾದ ಜ್ಯೋತಿಕುಮಾರ ಪಾಟೀಲ ಹಾಗೂ ಕಾಕಾಸಾಹೇಬ ಪಾಟೀಲ ನೇತೃತ್ವದ ರೈತ ಹಿತ ರಕ್ಷಣಾ ಪೆನಲ್‌ನ 11 ಜನ, ರೈತ ಅಭಿವೃದ್ಧಿ ಪೆನಲ್‌ನ ಓರ್ವ ಮಹಿಳೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಫೆ.1ರಂದು ವಿವಿಧೋದ್ದೇಶ ಪಿಕೆಪಿಎಸ್‌ಗೆ ಚುನಾವಣೆ ನಡೆದಿತ್ತು. ಭಾನುವಾರ ಪೊಲೀಸ್ ಭದ್ರತೆಯಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ರೈತ ಹಿತ ರಕ್ಷಣಾ ಪೆನಲ್‌ನ ಸ್ವಪ್ನಿಲ ಪಾಟೀಲ, ಪದ್ಮಾಕರ ಕರವ, ಶಾಂತಿನಾಥ ಮಾಲಗಾಂವೆ, ಬಸಗೌಡ ಪಾಟೀಲ, ರಾವಸಾಹೇಬ ಚೌಗಲಾ, ಸುವರ್ಣಾ ಪಾಟೀಲ, ರೂಪಾಲಿ ಪವಾರ, ಖಾಹಾಸಾಬ್ ಮುಲ್ಲಾ, ಅಪ್ಪಾಸಾಹೇಬ ಗುಮಟೆ, ಅನಿಲ ಭಜಂತ್ರಿ, ಲಕ್ಕಪ್ಪ ಕೋಳಿ, ರೈತ ಅಭಿವೃದ್ಧಿ ಪೆನಲ್‌ನ ಭಾರತಿ ಚೌಗಲಾ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ಅಥಣಿ ಸಹಕಾರ ಅಭಿವೃದ್ಧಿ ಅಧಿಕಾರಿ ಆರ್.ಎನ್.ನೂಲಿ ನೇತೃತ್ವದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಫಲಿತಾಂಶ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಗುಲಾಲ ಎರಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸೌರಭ ಪಾಟೀಲ, ಪ್ರಕಾಶ ಪಾಟೀಲ, ರಾಜು ಕರವ, ವಿಲಾಸ ಮಿರ್ಜೆ ಇತರರಿದ್ದರು.