ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಬಸವೇಶ್ವರ ಪಿಕೆಪಿಎಸ್ ಸಂಘದ ವಾರ್ಷಿಕ ಸಭೆಯಲ್ಲಿ ತಪೋವನದ ಗುರುಪಾದೇಶ್ವರ ಸ್ವಾಮೀಜಿ ಮಾತನಾಡಿದರು. ಶ್ರೀಶೈಲ ತಾಂವಶಿ, ಅಡಿವೆಪ್ಪ ಕೆಂಚಣ್ಣವರ, ಘಟಿವಾಳಪ್ಪ ಗುಡ್ಡಾಪುರ, ಬಸಪ್ಪ ಹಿಪ್ಪರಗಿ ಇತರರಿದ್ದರು. 
ಜಿಲ್ಲೆ

ರೈತ ಸುಖಿಯಾದರೆ ದೇಶ ಸಮೃದ್ಧಿ

ಅಥಣಿ ಗ್ರಾಮೀಣ, ಬೆಳಗಾವಿ: ರೈತನ ಬಾಳು ಸಮೃದ್ಧಿಯಾದರೆ ದೇಶ ಸುಭಿಕ್ಷೆಯಿಂದ ಇರಲಿದೆ ಎಂದು ಯಕ್ಕಂಚಿ ಗುರುದೇವ ತಪೋವನದ ಗುರುಪಾದೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವೇಶ್ವರ ಪಿಕೆಪಿಎಸ್ ಸಂಘದ 56ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಹಕಾರಿ ಅಧ್ಯಕ್ಷ ಶ್ರೀಶೈಲ ತಾಂವಶಿ ಮಾತನಾಡಿ, ಸಂಘದ 78.64 ಲಕ್ಷ ಷೇರು ಬಂಡವಾಳವಿದ್ದು, 7.90 ಕೋಟಿ ದುಡಿಯುವ ಬಂಡವಾಳವಿದೆ. 5.42 ಕೋಟಿ ಸಾಲ ವಿತರಿಸಲಾಗಿದ್ದು, 11.97 ಲಕ್ಷ ಲಾಭಾಂಶವಾಗಿದೆ ಎಂದರು.

ಸಿಇಒ ಮಲ್ಲಿಕಾರ್ಜುನ ಗುಡ್ಡಾಪುರ, ಉಪಾಧ್ಯಕ್ಷ ಪ್ರಕಾಶ ಪೂಜಾರಿ, ನಿರ್ದೇಶಕರಾದ ಅಡಿವೆಪ್ಪ ಕೆಂಚಣ್ಣವರ, ಘಟಿವಾಳಪ್ಪ ಗುಡ್ಡಾಪುರ, ಬಸಪ್ಪ ಹಿಪ್ಪರಗಿ, ಮಹಾದೇವ ಸೂರ್ಯವಂಶಿ, ದುಂಡಪ್ಪ ಹಿಪ್ಪರಗಿ, ಮುತ್ತಪ್ಪ ದೊಡವಾಡ, ಹುಷೇನ್ ಅವಟಿ, ಲಕ್ಷ್ಮಣ ಸಾತಣ್ಣವರ, ಈರಗೌಡ ಪಾಟೀಲ, ಭೀಮ ಕೇರಿ, ಲಚ್ಚಪ್ಪ ಪತ್ತಾರ, ಬಸಪ್ಪ ಕೋಹಳ್ಳಿ ಇದ್ದರು.