ಜಿಲ್ಲೆ

ರೈತ ಸಂಘದಿಂದ ರಸ್ತೆ ಸಂಚಾರ ತಡೆ

ಮದ್ದೂರು: ಕಬ್ಬಿನ ಎಫ್‌ಆರ್‌ಪಿ ಹೆಚ್ಚಿಸಬೇಕು. ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಬೆಸಗರಹಳ್ಳಿಯಲ್ಲಿ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ಮಾಡಿದರು.

ರೈತ ಸಂಘದ ಮುಖಂಡ ನಂಜುಂಡಯ್ಯ ಮಾತನಾಡಿ, ಬೆಸಗರಹಳ್ಳಿ ಭಾಗದಲ್ಲಿ ವಿದ್ಯುತ್ ಬಿಲ್ ಪಾವತಿಸದ ರೈತರು ಮತ್ತು ಕೂಲಿಕಾರರ ಮನೆಗಳ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ವಿದ್ಯುತ್ ಕಡಿತ ಮಾಡದಂತೆ ಅಧಿಕಾರಿಗಳಿಗೆ ಸೂಚಿಸಬೇಕು. ಕಬ್ಬಿನ ಉಪ ಉತ್ಪನಗಳ ಲಾಭವನ್ನು ರೈತರಿಗೆ ನೀಡಬೇಕು. ತಕ್ಷಣ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಭತ್ತ ಖರೀದಿ ಮಿತಿಯನ್ನು ತೆಗೆದುಹಾಕಬೇಕು. ಕಬ್ಬಿನ ಬಾಕಿ ಹಣವನ್ನು ನಿಗದಿತ ಸಮಯಕ್ಕೆ ಪಾವತಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಉಪ ತಹಸೀಲ್ದಾರ್ ದೇವರಾಜು ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಾಂಪುರ ಸೀತಾರಾಮು, ಮುಖಂಡರಾದ ಗುಡಿದೊಡ್ಡಿ ಶಿವಲಿಂಗಯ್ಯ, ಸೊ.ಶಿ.ಪ್ರಕಾಶ್, ಪ್ರಭುಲಿಂಗ, ಪಣ್ಣೆದೊಡ್ಡಿ ವೆಂಕಟೇಶ್, ರಮೇಶ್, ಹುರುಗಲವಾಡಿ ರಾಮಯ್ಯ, ಮರಲಿಂಗ, ಮಧು, ಶಿವಲಿಂಗ, ಎಂ.ಜಿ.ನಂಜೇಶ್, ಡಿ.ಕೆ.ಚಂದ್ರ, ಶಿವರಾಜು, ಲೋಕೇಶ್, ರಾಹುಲ್, ಚೆನ್ನಪ್ಪ, ಕೆ.ಜಿ. ಉಮೇಶ್, ಪುಟ್ಟಲಿಂಗಯ್ಯ, ಸ್ವಾಮಿ, ಜಯರಾಮು, ಪ್ರಸನ್ನ, ಶಿವಣ್ಣ, ಕೃಷ್ಣಪ್ಪ ಇತರರಿದ್ದರು.