ಜಿಲ್ಲೆ

ರೈತ ಸಂಘದಿಂದ ಭದ್ರೆಗೆ ಬಾಗಿನ

ಭದ್ರಾವತಿ: ತಾಲೂಕಿನ ಬಿ.ಆರ್. ಪ್ರಾಜೆಕ್ಟ್​ನಲ್ಲಿರುವ ಭದ್ರಾ ಜಲಾಶಯಕ್ಕೆ ರೈತ ಸಂಘದ ಮುಖಂಡ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಬಾಗಿನ ಅರ್ಪಿಲಾಯಿತು.

ಎಚ್.ಆರ್.ಬಸವರಾಜಪ್ಪ ಮಾತನಾಡಿ, ಕಳೆದ 3 ವರ್ಷಗಳಿಂದಲೂ ಜಲಾಶಯ ಭರ್ತಿಯಾಗುತ್ತಿದೆ. ಜಲಾಶಯದಲ್ಲಿ 68.676 ಟಿಎಂಸಿ ನೀರಿದ್ದು ಡೆಡ್ ಸ್ಟೋರೇಜ್ ಹಾಗೂ ಬೇಸಿಗೆ ಕುಡಿಯುವ ನೀರು ಹೊರತುಪಡಿಸಿ 48 ಟಿಎಂಸಿ ನೀರು 160 ದಿನದವರೆಗೂ ಹರಿಸಬಹುದಾಗಿದೆ. ರೈತರು ನೀರಿನ ಸದ್ಬಳಕೆ ಮಾಡಿಕೊಂಡರೆ ಮುಂದಿನ ಬೇಸಿಗೆ ಬೆಳೆಯನ್ನೂ ಬೆಳೆಯಬಹುದು ಎಂದರು.

ತುಂಗಾ ನದಿಯಿಂದ ಕಣಬೂರು ಮತ್ತು ಕುಸ್ಕೂರು ಬಳಿಯ ಪಂಪ್​ಹೌಸ್ ಕಾಮಗಾರಿ ಈಗ ಆರಂಭವಾಗಿದ್ದು ಪೂರ್ಣಗೊಳ್ಳಲು ಇನ್ನೂ 2 ವರ್ಷ ಬೇಕಾಗಬಹುದು. ಬಯಲುಸೀಮೆಗೆ ನೀರು ಕೊಡಲು ನಮ್ಮ ತಕರಾರು ಇಲ್ಲ. ಶೀಘ್ರ ತುಂಗಾ ನದಿಯಂಚಿನ 17 ಟಿಎಂಸಿ ನೀರೆತ್ತಿ, ಭದ್ರಾನದಿಯಂಚಿನ 6.5 ಟಿಎಂಸಿ ನೀರು ಸೇರಿ ಒಟ್ಟು 23.5 ಟಿಎಂಸಿ ನೀರು ಕೊಡಲು ಸರ್ಕಾರದ ಯೋಜನೆ ಮಂಜೂರಾಗಿದ್ದು ತುಂಗಾನದಿಯಂಚಿನ ಕಾಮಗಾರಿ ಕೂಡಲೇ ಪೂರ್ಣಗೊಳ್ಳಬೇಕು ಎಂದರು.

ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಟಿ.ಎಂ.ಚಂದ್ರಪ್ಪ, ಹಿಟ್ಟೂರು ರಾಜು, ಈಶಣ್ಣ, ಡಿ.ಎಚ್.ರಾಮಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ, ಹಾಲಪ್ಪ ಶೇಖರಪ್ಪ, ಪರಮಶಿವಯ್ಯ ಇತರರಿದ್ದರು.