ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ 
ಜಿಲ್ಲೆ

ರೈತ ಸಂಘದ ಮೇಲಿನ ಆರೋಪ ನಿರಾಧಾರ

ಚಿಕ್ಕಮಗಳೂರು: ಮರ್ಲೆ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆಗೆ ಸಂಬAಧಿಸಿದAತೆ ಮಹಿಳೆ ಕಲ್ಪನಾ ಅವರು ರೈತರ ಸಂಘದ ಮೇಲೆ ಮಾಡಿರುವ ಆರೋಪ ನಿರಾಧಾರವಾಗಿದೆ. ಆರೋಪ ಸಾಬೀತುಪಡಿಸಬೇಕು. ಇಲ್ಲವಾದಲ್ಲಿ ರೈತ ಸಂಘಟನೆಯ ಕ್ಷಮೆ ಕೇಳಬೇಕು ಎಂದು ರೈತ ಸಂಘದ ಮಾಜಿ ಅಧ್ಯಕ್ಷ ಗುರುಶಾಂತಪ್ಪ ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೈದ್ಧಾಂತಿಕ ಹಿನ್ನಲೆಯಿಂದ ಶಿಸ್ತುಬದ್ಧವಾಗಿ ಕಟ್ಟಿದ ಜನಪರ ಸಂಘಟನೆಯ ಮೇಲೆ ಆರೋಪ ಮಾಡುವಾಗ ಎಚ್ಚರಿಕೆ ಇರಬೇಕು. ಜೊತೆಗೆ ಆರೋಪ ಆಧಾರ ಸಹಿತವಾಗಿರಬೇಕು. ಕೇಳಿದ ತಕ್ಷಣ ನ್ಯಾಯಕೊಡಿಸಲು ಅಂಗಡಿಯಲ್ಲಿ ನ್ಯಾಯ ಮಾರಾಟವಾಗುವ ಸಲಕರಣೆಯಲ್ಲ. ಅನ್ಯಾಯವಾಗಿದ್ದರೆ ಹೋರಾಟದ ಮೂಲಕ ನ್ಯಾಯಪಡೆದುಕೊಳ್ಳಬೇಕಾಗುತ್ತದೆ ಎಂಬ ಸಾಮಾನ್ಯ ತಿಳಿವಳಿಕೆ ಇರಬೇಕಾಗುತ್ತದೆ ಎಂದು ಹೇಳಿದರು.

ರೈತ ಸಂಘಟನೆ ಯಾರ ಹಣ, ಯಾರ ಪ್ರಾಯೋಜಕತ್ವದಲ್ಲಿ ನಡೆಯುವ ಸಂಘಟನೆಯಲ್ಲ. ನಿಮ್ಮ ಮರ್ಜಿಗೆ ಕುಣಿಯಲು ಸಂಘದ ಕಾರ್ಯಕರ್ತರು ನಿಮ್ಮ ಮನೆಯ ಆಳುಗಳಲ್ಲ. ಸಮಸ್ಯೆಗೆ ಸಂಬAಧಿಸಿದAತೆ ಅಗತ್ಯ ದಾಖಲೆಗಳಿಗಾಗಿ ಜಿಲ್ಲಾಧಿಕಾರಿ ಕಚೇರಿ,ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂ ವಿಜ್ಞಾನ ಇಲಾಖೆಗಳಿಗೆ ರೈತ ಸಂಘ ಪತ್ರ ಬರೆದು ಉತ್ತರಕ್ಕಾಗಿ ಕಾಯುತ್ತಿದೆ. ಗಣಿಗಾರಿಕೆ ನಡೆಯುತ್ತಿರುವ ಸ್ಥಳದಿಂದಲೇ ಹೋರಾಟಕ್ಕೆ ಚಾಲನೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿತ್ತು. ಅಷ್ಟರೊಳಗೆ ಮಹಿಳೆ ರೈತ ಸಂಘದ ಮೇಲೆ ಆರೋಪಮಾಡಿರುವುದು ಸರಿಯಲ್ಲ ಎಂದು ತಿಳಿಸಿದರು.

ಸಮಸ್ಯೆಗೆ ಸಂಬAಧಿಸಿದAತೆ ಗ್ರಾಮಪಂಚಾಯಿತಿ ಸದಸ್ಯರು, ಗ್ರಾಮಸ್ಥರನ್ನು ಸಂಪರ್ಕಿಸುವAತೆ ಮಹಿಳೆಯ ಪತಿಗೆ ತಿಳಿಸಿದ್ದು, ಸರಿಯಾಗಿ ಸ್ಪಂದಿಸಲಿಲ್ಲ. ದಲಿತ ಸಂಘಟನೆಯೊAದಿಗೆ ಮರ್ಲೆ ಕೊಲ್ಲಾಪುರದಮ್ಮನ ದೇವಾಲಯದಿಂದ ಪಾದಯಾತ್ರೆ ನಡೆಸಿ ಸಮಸ್ಯೆಯ ಗಂಭೀರತೆಯನ್ನು ಸಂಬAಧಿಸಿದ ಇಲಾಖೆ ಗಮನ ಸೆಳೆಯಲು ಕಾರ್ಯಕ್ರಮ ರೂಪಿಸಲು ಚರ್ಚಿಸುತ್ತಿರುವಾಗಲೇ ಪಲಾಯನ ಮಾಡಿರುವುದು ಅನುಮಾನಕ್ಕೆ ಎಡೆಮಾಡಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್, ಪ್ರಧಾನ ಕಾರ್ಯದರ್ಶಿ ಎಂ.ಬಿ. ಚಂದ್ರಶೇಖರ್, ಜಿಲ್ಲಾಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ಜಿಲ್ಲಾ ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ಮುಖಂಡರಾದ ಪ್ರದೀಪ, ಎಸ್.ಬಿ.ನಿರಂಜನ ಮೂರ್ತಿ ಇದ್ದರು.