ಜಿಲ್ಲೆ

ರೈತ ಭವನ ಅಭಿವೃದ್ಧಿಗೆ ಅಸ್ತು

ವಿಕ್ರಮ ನಾಡಿಗೇರ ಧಾರವಾಡ
ಅನ್ನದಾತರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದ ಹಳೇ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ 1970ರ ದಶಕದಲ್ಲಿ ನಿರ್ವಿುಸಿದ್ದ ರೈತ ಭವನಕ್ಕೆ ಮರುಜೀವ ನೀಡಲು ಅಂತೂ ಕಾಲ ಕೂಡಿ ಬಂದಿದೆ. ದಶಕಗಳಿಂದ ಪಾಳು ಬಿದ್ದಿರುವ ಕಟ್ಟಡದ ವಿಷಯದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಸರ್ಕಾರ ಇತ್ತೀಚೆಗೆ ಹಸಿರು ನಿಶಾನೆ ತೋರಿಸಿದೆ.
ಮಾರುಕಟ್ಟೆಗೆ ಆಗಮಿಸುವ ರೈತರ ಪಾಲಿನ ತಂಗುವ ತಾಣವಾಗಬೇಕಿದ್ದ ‘ಭವನ’ವು ನಿರ್ವಹಣೆ ಕೊರತೆಯಿಂದ ಅನ್ನದಾತರಿಂದ ದೂರವಾಗಿದೆ. ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆಯಾಗಿತ್ತು. ಈ ಭವನವು ಮತ್ತೆ ಬಳಕೆಯಾಗುವಂತೆ ಮಾಡಲು ಅನುಮತಿ ಕೋರಿ ಎಪಿಎಂಸಿ ಆಡಳಿತ ಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಅನುಮೋದನೆ ನೀಡಲು ವರ್ಷಾನುಗಟ್ಟಲೆ ಮೀನಮೇಷ ಎಣಿಸಿದ ಸರ್ಕಾರ ಕೆಲ ದಿನಗಳ ಹಿಂದೆ ಅಸ್ತು ಎಂದು ತಿಳಿಸಿದೆ. ಸರ್ಕಾರದ ಆದೇಶ ಬರುತ್ತಿದ್ದಂತೆ ಆಡಳಿತ ಮಂಡಳಿ ಸಭೆ ನಡೆಸಿ ಮುಂದಿನ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದೆ. ಆದರೆ, ನವೀಕರಣವೋ ಅಥವಾ ಮರು ನಿರ್ವಣವೋ ಎಂಬುದರ ಕುರಿತು ಇನ್ನಷ್ಟೇ ತೀರ್ವನವಾಗಬೇಕಿದೆ.
ರೈತರು ಎಪಿಎಂಸಿಗೆ ದವಸ-ಧಾನ್ಯ ಮಾರಾಟ, ಖರೀದಿ ಹಾಗೂ ಇತರ ಕಾರ್ಯಗಳಿಗೆ ಆಗಮಿಸಿದಾಗ ವಿಶ್ರಾಂತಿ, ವಾಸ್ತವ್ಯ ಮಾಡಲು ಅನುಕೂಲವಾಗುವಂತೆ 4 ಗುಂಟೆ ಜಾಗದಲ್ಲಿ ಭವನ ನಿರ್ವಿುಸಲಾಗಿದೆ. ಆದರೆ, ಅನೇಕ ವರ್ಷಗಳಿಂದ ಪಾಳು ಬಿದ್ದು ಕಾಯಕಲ್ಪಕ್ಕೆ ಕಾದಿತ್ತು. ಈ ಮೊದಲು ಹಳೇ ಎಪಿಎಂಸಿ ಸಮೀಪವೇ ಇದ್ದ ಕಾರಣ ತುಸು ನಿರ್ವಹಣೆ ಆಗುತ್ತಿತ್ತು. ಕೆಲ ವರ್ಷಗಳ ಹಿಂದೆ ಮುರುಘಾಮಠ ಬಳಿ ಎಪಿಎಂಸಿಯನ್ನು ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಕಟ್ಟಡ ಸಂಪೂರ್ಣ ನಿರ್ಲಕ್ಷ್ಯ್ಕೆ ಒಳಗಾಯಿತು. ಆವರಣದಲ್ಲಿ ಗಿಡಗಂಟಿ ಬೆಳೆದು ಧೂಳು ಹಿಡಿದಿದೆ. ಹೀಗೆ ಬೇಡದ ಸ್ಥಳವಾಗಿ ಪರಿವರ್ತನೆಗೊಂಡ ಕಟ್ಟಡವು ಅನೈತಿಕ ಚಟುವಟಿಕೆ ತಾಣವಾಗಿದೆ.
ಸಭೆ ಕರೆದು ತೀರ್ಮಾನ: ಈಗಿರುವ ಎರಡು ಅಂತಸ್ತಿನ ಕಟ್ಟಡ ನವೀಕರಣ ಮಾಡಿದರೆ ಹೆಚ್ಚೆಂದರೆ 30-40 ಜನ ಉಳಿದುಕೊಳ್ಳಬಹುದು. ಅದರ ಬದಲು, ನಾಲ್ಕು ಗುಂಟೆ ಜಾಗ ಇರುವುದರಿಂದ ಆಧುನಿಕ ರೀತಿಯಲ್ಲಿ ವಿನ್ಯಾಸಗೊಳಿಸಿದ ಹೊಸ ಕಟ್ಟಡ ನಿರ್ವಿುಸಿದರೆ ವಾಹನ ನಿಲುಗಡೆಗೂ ಸಾಕಷ್ಟು ಜಾಗ ಒದಗಿಸಿ, ಹೆಚ್ಚು ಜನ ರೈತರು ತಂಗಲು ಅನುಕೂಲ ಕಲ್ಪಿಸಬಹುದು. ಜಿಲ್ಲಾ ಕೇಂದ್ರದಲ್ಲಿ ಹೆಚ್ಚು ವಿಶಾಲ, ಅನುಕೂಲಕರ ಭವನವೇ ನಿರ್ವಣವಾಗಬೇಕು ಎಂದು ಕೆಲ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಮ್ಮೆ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲು ಎಪಿಎಂಸಿ ಆಡಳಿತ ಮಂಡಳಿ ನಿರ್ಧರಿಸಿದೆ.
ಎಪಿಎಂಸಿಯದೇ ಹಣ: ರೈತ ಭವನ ನವೀಕರಣ ಅಥವಾ ನಿರ್ವಣಕ್ಕೆ ಸರ್ಕಾರ ಬೊಕ್ಕಸದಿಂದ ಹಣ ಒದಗಿಸಬೇಕಿಲ್ಲ. ತೆರಿಗೆ ರೂಪದಲ್ಲಿ ಸಂಗ್ರಹವಾದ ನಿಧಿಯನ್ನು ಬಳಸಿಕೊಳ್ಳಲು ಅವಕಾಶವಿದೆ. ಹಣ ಕೊಡುವ ಅವಶ್ಯಕತೆ ಇಲ್ಲದಿದ್ದರೂ ಸರ್ಕಾರ ವಿಳಂಬ ಮಾಡಿದ್ದರಿಂದಾಗಿ ಕಾಮಗಾರಿ ವೆಚ್ಚ ಕಾಲಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಹೀಗಾಗಿ, ನವೀಕರಣ ಮಾಡಬೇಕೆ ಅಥವಾ ಕಟ್ಟಡ ಕೆಡವಿ ಹೊಸದಾಗಿ ನಿರ್ವಿುಸಬೇಕೆ ಎಂಬ ವಿಷಯದಲ್ಲಿ ಎಪಿಎಂಸಿ ಆಡಳಿತ ಮಂಡಳಿ ಇನ್ನೂ ಅಂತಿಮ ತೀರ್ವನಕ್ಕೆ ಬಂದಿಲ್ಲ.

ರೈತ ಭವನದ ಜಾಗವನ್ನು ಯಾವುದೇ ಸಂಘಕ್ಕೆ ನೀಡದಿರಲು ತೀರ್ವನಿಸಲಾಗಿದೆ. ಶಿಥಿಲಗೊಂಡ ರೈತ ಭವನ ಕಟ್ಟಡದ ವಿಷಯದಲ್ಲಿ ಮುಂದಿನ ಕ್ರಮಕ್ಕೆ ಕೆಲ ದಿನಗಳ ಹಿಂದಷ್ಟೇ ಸರ್ಕಾರ ಆದೇಶ ಮಾಡಿದೆ. ಕಟ್ಟಡದ ದುರಸ್ತಿ ಮಾಡುವುದೋ ಅಥವಾ ಹೊಸದಾಗಿ ನಿರ್ವಿುಸುವುದೋ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನಷ್ಟೇ ಅಂತಿಮ ತೀರ್ವನಕ್ಕೆ ಬರಬೇಕಿದೆ.| ವಿ.ಜಿ. ಹಿರೇಮಠ ಎಪಿಎಂಸಿ ಕಾರ್ಯದರ್ಶಿ


ಪ್ರತಿಭಟನೆಗೆ ದಾರಿಯಾಗಿತ್ತು: ಭವನ ಇರುವ ಜಾಗ ನೀಡುವಂತೆ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದವರು ಎಪಿಎಂಸಿಗೆ ಮನವಿ ಸಲ್ಲಿಸಿದ್ದರು. ಈ ಮಾಹಿತಿ ಅರಿತ ಕೆಲ ರೈತ ಮುಖಂಡರು, ಅನ್ನದಾತರಿಗಾಗಿ ಇರುವ ಜಾಗವನ್ನು ಯಾವುದೇ ಕಾರಣಕ್ಕೂ ಪರಭಾರೆ ಮಾಡಕೂಡದು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ರೈತರದ್ದೇ ಆದರೂ ಒಮ್ಮೆ ಅದಕ್ಕೆ ಜಾಗ ನೀಡಿದರೆ ರೈತ ಭವನ ನವೀಕರಣ ಅಥವಾ ಮರು ನಿರ್ವಣದ ಅವಕಾಶ ತಪ್ಪಿಹೋಗುತ್ತದೆ. ಭವನಕ್ಕಾಗಿ ಮತ್ತೆ ಜಾಗ ಹೊಂದಿಸುವುದು ದುಸ್ಸಾಧ್ಯ. ಹೀಗಾಗಿ, ಪರಭಾರೆ ಸಲ್ಲದು ಎಂಬ ರೈತ ಮುಖಂಡರ ಪ್ರಬಲ ವಾದಕ್ಕೆ ಎಪಿಎಂಸಿ ಆಡಳಿತ ಮಂಡಳಿ ಸಹಮತ ವ್ಯಕ್ತಪಡಿಸಿತು. ಜಾಗವನ್ನು ಬೇರೆ ಯಾರಿಗೂ ನೀಡದಂತೆ ತೀರ್ಮಾನ ತೆಗೆದುಕೊಂಡು, ನವೀಕರಣ / ಮರುನಿರ್ವಣಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು