ಚಿಕ್ಕಮಗಳೂರು: ರೈತ ದೇಶದ ಬೆನ್ನೆಲುಬು, ರೈತನ ಬೆನ್ನಲುಬು ಗೋವು. ರೈತರಿಗೆ ಆಧಾರಸ್ಥಂಬವಾದ ಗೋವಿನ ಸಂಪತ್ತು ಸಿರಿವಂತಿಕೆ ಎನ್ನುವ ಪದ್ಧತಿ. ಪೂರ್ವಿಕರ ಕಾಲದಲ್ಲಿ ಆಸ್ತಿ-ಅಂತಸ್ತು ಹೊಂದಿವನು ಶ್ರೀಮಂತನಲ್ಲ, ಅತಿಹೆಚ್ಚು ಹಸುಗಳನ್ನು ಹೊಂದಿರುವ ರೈತ ನಿಜವಾದ ಶ್ರೀಮಂತ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ತಾಲೂಕಿನ ಮುಗುಳುವಳ್ಳಿ ಗ್ರಾಮದಲ್ಲಿ ದಿ. ಎಸ್.ಎಲ್.ಧರ್ಮೇಗೌಡರ ಸ್ಮರಣಾರ್ಥ ನಿರ್ಮಿಸಿರುವ ಸಭೆ ಸಭಾಂಗಣ ಮತ್ತು ನೂತನ ಬಿಎಂಸಿ. ಹಾಲಿನ ಡೈರಿ ಶೇಖರಣಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದೆ ರಾಜಾಶ್ರಯ ಅಥವಾ ರಾಜಮಹಾರಾಜರಲ್ಲಿ ಲಕ್ಷಗಟ್ಟಲೇ ಹಸುಗಳಿದ್ದವು. ಮಹಾಭಾರತದ ಕಥೆಗಳಲ್ಲಿ ಗೋವುಗಳನ್ನು ಕಳ್ಳತನ ನಡೆಸಿದ ಪರಿಣಾಮ ಯುದ್ಧಗಳೇ ಆರಂಭಗೊAಡಿದ್ದವು. ಅಷ್ಟು ಮಟ್ಟಿಗೆ ಗೋವುಗಳು ಪ್ರಧಾನ ಸಂಪತ್ತಾಗಿತ್ತು. ಗೋವಾಧಾರಿತ ಕೃಷಿ ವ್ಯವಸ್ಥೆಯ ಜೊತೆಗೆ ಹಸಿರುಕ್ರಾಂತಿ ರೈತನನ್ನು ಹಾಗೂ ದೇಶವನ್ನು ಸ್ವಾವಲಂಭಿಯಾಗಿಸಿತು ಎಂದು ತಿಳಿಸಿದರು.
ಇತ್ತೀಚಿನ ಕೃಷಿ ಚಟುವಟಿಕೆಗಳಲ್ಲಿ ಹೈಬ್ರೀಡ್ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳಿಲ್ಲದೇ ಬೆಳೆಗಳು ಹುಟ್ಟುತ್ತಿಲ್ಲ. ಒಂದು ವೇಳೆ ಹುಟ್ಟಿದರೂ ಫಸಲು ಬಿಡದಿರುವ ಪರಿಸ್ಥಿತಿಯಿದೆ. ಈ ನಡುವೆ ಹತ್ತಾರು ಲೀಟರ್‌ಗಳಷ್ಟು ಹಾಲನ್ನು ನೀಡುವ ಹಸುಗಳಿಂದ ಕ್ಷೀರಕ್ರಾಂತಿಯೇ ಸೃಷ್ಟಿಯಾಯಿತು. ಆದರೆ ಮನುಷ್ಯ ಗೋವಿನ ಜೊತೆಗಿನ ಸಂಬAಧ ಕಳೆದು ಸಂಬAಧದ ಜಾಗಕ್ಕೆ ವ್ಯವಹಾರ ಬಂದಿದೆ ಎಂದು ವಿಷಾಧಿಸಿದರು.
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಸೋನಾಲ್ ಗೌಡ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹೆಚ್ಚಳಗೊಳಿಸಿರುವ ದಿ. ಧರ್ಮೇಗೌಡರ ಕಾರ್ಯ ಜಿಲ್ಲೆ ಮೆಚ್ಚುವಂತಾಗಿದೆ. ಪ್ರಸ್ತುತ ೩೦೦ಕ್ಕೂ ಸಹಕಾರ ಸಂಘವನ್ನು ಮುಂದೆ ೫೦೦ಕ್ಕೆ ಏರಿಸುವ ಗುರಿಯಿದೆ ಎಂದು ತಿಳಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ೧.೯೦ ಲಕ್ಷ ಲೀಟರ್‌ಗೆ ಕೆಎಂಎಫ್ ೨೩ ಕೋಟಿ ರೂ. ಹಣವನ್ನು ಹೈನುಗಾರಿಕಾ ರೈತರಿಗೆ ನೀಡುತ್ತಿದೆ. ವಿಶೇಷವಾಗಿ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳನ್ನು ಒಳಗೊಂಡು ಸ್ಥಾಪಿಸಿರುವ ಹಾಲು ಒಕ್ಕೂಟವು ಹೆಚ್ಚು ಹಾಲು ಉತ್ಪಾದಿಸುವ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಎಂ.ವಿಜಯ್ ಕುಮಾರ್, ಡಿಸಿಸಿ ಬ್ಯಾಂಕ್‌ನ ೬.೫೦ ಲಕ್ಷ ರೂ.ಗಳ ಅನುದಾನದಿಂದ ಗ್ರಾಮದಲ್ಲಿ ಮೀಟಿಂಗ್ ಹಾಲ್ ಹಾಗೂ ನೂತನ ಬಿಎಂಸಿ ಕಟ್ಟಡಕ್ಕೆ ನಿರ್ಮಾಣಗೊಂಡಿದೆ. ಒಟ್ಟಾರೆ ಹಾಲಿನ ಡೈರಿ, ಸಹಕಾರ ಸಂಘದ ಅಭಿವೃದ್ಧಿಗೆ ಮಾಜಿ ಉಪಸಭಾಪತಿ ಧರ್ಮೇಗೌಡ, ಜಿಪಂ ಮಾಜಿ ಸದಸ್ಯ ನಿರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರ ಸಹಕಾರದಿಂದ ಸುಸಜ್ಜಿತ ಕಟ್ಟಡವು ನಿರ್ಮಾಣಗೊಂಡು ರೈತರಿಗೆ ಅನುಕೂಲವಾಗಿದೆ ಎಂದರು.
ಮುಗುಳುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಮುಗುಳುವಳ್ಳಿ ನಿರಂಜನ್, ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ರನ್ನಕುಮಾರ್, ಉಪಾಧ್ಯಕ್ಷೆ ಸುನಂದ, ನಿರ್ದೇಶಕರಾದ ಎಂ.ಎಸ್.ದಿನೇಶ್‌ಕುಮಾರ್, ಎಂ.ದಿವಾಕರ್, ಎಂ.ವಿ.ಗಿರೀಶಯ್ಯ, ಎಂ. ಎಸ್.ವಿಶ್ವನಾಥ್, ಎಂ.ಆರ್.ಪರಮೇಶ್, ಹುಲಿಯಪ್ಪ, ರಾಧಾಮಣಿ, ಎಂ.ಎA.ನAಜುAಡಪ್ಪ, ಕುಮಾರ್, ಕಾರ್ಯದರ್ಶಿ ಎಂ.ಎA.ಪರಮೇಶ್ ಉಪಸ್ಥಿತರಿದ್ದರು.