ತೆಲಸಂಗ ಗ್ರಾಮದಲ್ಲಿ ರೈತ ಸಂಘದಿಂದ ಏರ್ಪಡಿಸಿದ್ದ ರೈತ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಸುಭಾಷ ಖೊಬ್ರಿ ಮಾತನಾಡಿದರು. ವಿಲಾಸ ಮೋರೆ, ಮಕಬೂಲ್ ಮುಲ್ಲಾ, ಸಾಬು ಜಮಖಂಡಿ, ಈರಪ್ಪ ಹಿರೇಕುರಬರ್ ಇತರರಿದ್ದರು. 
ಜಿಲ್ಲೆ

ರೈತ ಕಲ್ಯಾಣದಿಂದ ಹುತಾತ್ಮರ ಆತ್ಮಕ್ಕೆ ಶಾಂತಿ

ತೆಲಸಂಗ: ಕಷಿ ಪ್ರಧಾನ ದೇಶದಲ್ಲಿ ರೆತನಿಗೆ ನೀರಾವರಿ, ಗುಣಮಟ್ಟದ ವಿದ್ಯುತ್, ಬೆಳೆದ ಬೆಳೆಗೆ ವೆಜ್ಞಾನಿಕ ಬೆಲೆ, ರೆತರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗಲೇ ಹುತಾತ್ಮ ರೆತರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ರೈತ ಸಂಘದ ಘಟಕ ಅಧ್ಯಕ್ಷ ಸುಭಾಷ ಖೊಬ್ರಿ ಹೇಳಿದರು.


ಗ್ರಾಮದಲ್ಲಿ ರೆತ ಸಂಘದಿಂದ ರೆತ ಹುತಾತ್ಮ ದಿನದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೆತ ದೇಶದ ಬೆನ್ನೆಲುಬು ಎಂದು ಭಾಷಣಗಳಲ್ಲಿ ಹೇಳಿದರೆ ಸಾಲದು. ರೆತ ತನ್ನ ನೇಗಿಲು ಸಾಹಸದಿಂದಲೇ ದೇಶಕ್ಕೆ ಅನ್ನ ಹಾಕುತ್ತಿದ್ದು, ಇಂತಹ ಶ್ರೇಷ್ಠ ಕಾಯಕಯೋಗಿಯನ್ನು ಸ್ಮರಿಸುವ ಮತ್ತು ಗೌರವಿಸುವ ಹಾಗೂ ಆತನ ಸಂಕಟ ಪರಿಹರಿಸುವ ಕೆಲಸವಾಗುತ್ತಿಲ್ಲ. ರೆತ ಬಂಡಾಯದ ಹೋರಾಟದಲ್ಲಿ ಹುತಾತ್ಮರಾಗಿರುವುದು ನಿಜಕ್ಕೂ ರೆತ ಸಮುದಾಯಕ್ಕೆ ನೋವನ್ನು ಉಂಟು ಮಾಡಿದೆ. ಯುವ ಸಮುದಾಯ ಪ್ರಸ್ತುತ ದಿನಮಾನಗಳಲ್ಲಿ ಕಷಿಯತ್ತ ಆಕರ್ಷಿತರಾಗುವಂತೆ ನೋಡಿಕೊಳ್ಳಿ. ಇಂದಿಲ್ಲ ನಾಳೆ ರೆತರಿಗೆ ನ್ಯಾಯ ದೊರೆಯಬಹುದೆಂಬ ನಂಬಿಕೆಯಿಂದ ರೆತ ಸಂಘ ಹೋರಾಟ ಮಾಡುತ್ತಲೇ ಇರುತ್ತದೆ ಎಂದು ಹೇಳಿದರು.


ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ, ಮಕಬೂಲ್ ಮುಲ್ಲಾ, ಸಾಬು ಜಮಖಂಡಿ, ಈರಪ್ಪ ಹಿರೇಕುರಬರ್ ಇತರರು ಇದ್ದರು.