ಸಿಂದಗಿ: ತಾಲೂಕಿನ ಗ್ರಾಮೀಣ ನ್ಯಾಯಬೆಲೆ ಅಂಗಡಿ ವರ್ತಕರ ಸಂಘದ ವತಿಯಿಂದ ಬಡ ಕೂಲಿಕಾರ್ಮಿಕರಿಗೆ ಹಾಗೂ ನಿರ್ಗತಿಕರಿಗೆ 50 ಆಹಾರದ ಕಿಟ್‌ಗಳನ್ನು ನೀಡಲಾಯಿತು.
ಅಕ್ಕಿ, ಹಿಟ್ಟು, ಎಣ್ಣೆ, ಸಕ್ಕರೆ ಸೇರಿ ಅಂದಾಜು ತಲಾ 500 ರೂ. ಮೌಲ್ಯದ ಕಿಟ್‌ಗಳನ್ನು ಸಿದ್ಧಪಡಿಸಿ, ಜಿಲ್ಲಾಧಿಕಾರಿಗಳ ಆದೇಶದಂತೆ ಉಪ ತಹಸೀಲ್ದಾರ್ ಸಿ.ಬಿ. ಬಾಬಾನಗರ ಅವರ ಮೂಲಕ ತಾಲೂಕಾಡಳಿತಕ್ಕೆ ನೀಡಲಾಯಿತು.
ತಾಲೂಕಿನ ಗ್ರಾಮೀಣ ನ್ಯಾಯಬೆಲೆ ಅಂಗಡಿ ವರ್ತಕರಾದ ನಾನಾಗೌಡ ಪಾಟೀಲ(ಬೆಕಿನಾಳ), ಎಂ. ಎಂ. ಪಾಟೀಲ(ಯಂಕಂಚಿ), ವಿ. ಎಂ. ಗಣಪೂರ(ಗೋಲಗೇರಿ), ಎಸ್. ಎಂ. ಪಡಶೆಟ್ಟಿ(ಕೆರೂಟಗಿ), ಸಿ.ಎಸ್. ಭಾವಿಕಟ್ಟಿ(ಗುಬ್ಬೇವಾಡ), ಎಸ್. ಎಸ್. ಪಾಟೀಲ(ಬೋರಗಿ) ಸೇರಿ ಕಂದಾಯ ಇಲಾಖೆಯ ರಮೇಶ ತಳವಾರ ಇದ್ದರು.