ರಾಯಬಾಗ: ತಾಲೂಕಿನ ಭೆಂಡವಾಡ (ಗುಡ್ಡದ) ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠದ ಜಾತ್ರಾ ಮಹೋತ್ಸವ ಏ.೧೧ರಿಂದ ೧೩ರ ವರೆಗೆ ಜರುಗಲಿದೆ. ೧೧ರಂದು ದೇವರ ಉತ್ಸವ ಮೂರ್ತಿಯು ಗುಡ್ಡದ ಶ್ರೀಮಠಕ್ಕೆ ಆಗಮಿಸುವುದು.
೧೨ರಂದು ಬೆಳಗ್ಗೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಲಿಂಗದೀಕ್ಷೆ ಮತ್ತು ಅಯ್ಯಾಚಾರ, ಮಧ್ಯಾಹ್ನ ನೈವೇದ್ಯ, ಸಂಜೆ ೫ ಗಂಟೆಗೆ ಧಾರ್ಮಿಕ ಶಿವಾನುಭವ ಕಾರ್ಯಕ್ರಮ ಜರುಗಲಿದ್ದು, ಬೆಲ್ಲದ ಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿ ಅಧ್ಯಕ್ಷತೆ ವಹಿಸುವರು. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರತಾಪರಾವ ಪಾಟೀಲ ಉದ್ಘಾಟಿಸಲಿದ್ದಾರೆ.
ವಿರೂಪಾಕ್ಷ ಸ್ವಾಮೀಜಿ, ಪ್ರಭು ಮಹಾರಾಜರು, ಅಭಿನವ ದರಿದೇವರು ಸ್ವಾಮೀಜಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಡಿ.ಎಂ.ಐಹೊಳೆ, ಮಹೇಂದ್ರ ತಮ್ಮಣವರ ಇತರರು ಆಗಮಿಸಲಿದ್ದಾರೆ.
ರಾತ್ರಿ ೯ ಗಂಟೆಗೆ ಕರಡಿ ಮಜಲು ನಡೆಯಲಿದೆ. ೧೩ರಂದು ಬೆಳಗ್ಗೆ ಪಲ್ಲಕ್ಕಿಗಳು ರೇವಣಸಿದ್ದೇಶ್ವರ ಗಿರಿ (ಗುಡ್ಡ) ಏರುವುದು. ನಂತರ ಸಕ್ಕರೆ ನೈವೇದ್ಯ, ಮಧ್ಯಾಹ್ನ ಮಹಾಪ್ರಸಾದ, ಸಂಜೆ ಜಂಗೀ ನಿಕಾಲಿ ಕುಸ್ತಿಗಳು ಜರುಗಲಿವೆ.